Select Your Language

Notifications

webdunia
webdunia
webdunia
webdunia

ಕನಸಿನಲ್ಲಿ ಶಿವನಿಗೆ ಸಂಬಂದಪಟ್ಟ ಈ ವಸ್ತುಗಳು ಕಂಡರೆ ಏನಾಗುತ್ತೆ ಗೊತ್ತಾ…?

ಕನಸಿನಲ್ಲಿ ಶಿವನಿಗೆ ಸಂಬಂದಪಟ್ಟ ಈ ವಸ್ತುಗಳು ಕಂಡರೆ ಏನಾಗುತ್ತೆ ಗೊತ್ತಾ…?
ಬೆಂಗಳೂರು , ಗುರುವಾರ, 12 ಏಪ್ರಿಲ್ 2018 (06:26 IST)
ಬೆಂಗಳೂರು : ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಅದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ 5 ಗಂಟೆಯ ಒಳಗೆ ಬೀಳುವ ಕನಸುಗಳು ನಿಜವಾಗುತ್ತವೆ ಎಂಬ ನಂಬಿಕೆ ಇದೆ. ಕನಸಿನಲ್ಲಿ ಅನೇಕ ವ್ಯಕ್ತಿಗಳು ಹಾಗೂ ವಸ್ತುಗಳು ಬಂದು ಹೋಗುತ್ತವೆ. ಆದ್ರೆ ಕನಸಿನಲ್ಲಿ ಬರೋದೆಲ್ಲಾ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ ಅನೇಕರಿಗೆ ಗೊತ್ತಿರುವುದಿಲ್ಲ.ಅದರಲ್ಲಿ ದೇವರ ದೇವ ಮಹಾದೇವ ಸಂಭಂದಿಸಿದ ವಸ್ತುಗಳು ಕನಸಿನಲ್ಲಿ ಬಂದ್ರೆ ಅದೃಷ್ಟ ಬಾಗಿಲು ತೆರೆದಿದೆ ಎಂದೇ ಅರ್ಥ.


*ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡ್ರೆ ಅನೇಕ ದಿನಗಳಿಂದ ಕಾಡ್ತಿದ್ದ ಸಮಸ್ಯೆಗೆ ಸದ್ಯದಲ್ಲಿಯೇ ಪರಿಹಾರ ಸಿಗಲಿದೆ ಎಂದರ್ಥ. ಕನಸಿನಲ್ಲಿ ಶಿವಲಿಂಗ ಕಂಡ ಮರುದಿನ ಶಿವಲಿಂಗಕ್ಕೆ ಹಾಲನ್ನು ಅರ್ಪಿಸುವುದು ಒಳ್ಳೆಯದು.


*ಕನಸಿನಲ್ಲಿ ಶಿವ ತಾಂಡವ ನೃತ್ಯವಾಡುತ್ತಿದ್ದಂತೆ ಕಂಡರೆ ಭಯಪಡಬೇಡಿ.ಯಾಕೆಂದರೆ ಇದು ಶುಭ ಫಲದ ಸಂಕೇತ. ಸ್ವಲ್ಪ ಪ್ರಯತ್ನಪಟ್ಟರೆ ಯಶಸ್ಸು ಸಿಗುತ್ತೆ ಎಂಬುದು ಇದರ ಅರ್ಥ. ಈ ಕನಸು ಧನ ವೃದ್ಧಿಯ ಸಂಕೇತವೂ ಹೌದು.
*ಶಿವನ ದೇವಸ್ಥಾನ ಕನಸಿನಲ್ಲಿ ಕಂಡರೆ ದೀರ್ಘ ಕಾಲದಿಂದ ಕಾಡುತ್ತಿದ್ದ ರೋಗ ಗುಣಮುಖವಾಗಲಿದೆ ಎಂದು ಅರ್ಥ
*ಕನಸಿನಲ್ಲಿ ಶಿವನ ಹಾವು ಕಾಣಿಸಿಕೊಂಡರೆ ಧನ ಲಾಭವಾಗಲಿದೆ ಎಂದರ್ಥ. ಹಾವು ನಿಮ್ಮ ಹಿಂದೆ ಇರುವಂತೆ ಕಂಡ್ರೆ ನಿಮಗೆ ನಾಗದೇವತೆಯ ಕೃಪೆಯಾಗಿದೆ ಎಂದು ಅರ್ಥೈಸಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಇದ್ದೇ ಇರುತ್ತದೆ. ಯಾಕೆ ಗೊತ್ತಾ..?