Select Your Language

Notifications

webdunia
webdunia
webdunia
webdunia

ಈರುಳ್ಳಿಯ ಆರೋಗ್ಯಕರ ಉಪಯೋಗಗಳು

ಈರುಳ್ಳಿಯ ಆರೋಗ್ಯಕರ ಉಪಯೋಗಗಳು
ಬೆಂಗಳೂರು , ಬುಧವಾರ, 6 ಜೂನ್ 2018 (17:45 IST)
ಪ್ರತೀ ದಿನ ಕಣ್ಣಲ್ಲಿ ನೀರು ತರಿಸುವ ಈರುಳ್ಳಿ ದೇಹವನ್ನು ಆರೋಗ್ಯವಾಗಿರಿಸುವ ಗುಣಗಳನ್ನು ಹೊಂದಿದೆ. ಹಸಿ ಈರುಳ್ಳಿ ಸೇವನೆಯಿಂದ ಬಹಳ ಪ್ರಯೋಜನಗಳಿವೆ ಅಂತ ಆಯುರ್ವೇದ ಹೇಳುತ್ತದೆ. ಈರುಳ್ಳಿಯಲ್ಲಿ ದೇಹಕ್ಕೆ ಉತ್ತಮ ಪೋಷಣೆ ಒದಗಿಸಬಲ್ಲ ವಿಟಮಿನ್‌ಗಳು ಹೇರಳವಾಗಿದ್ದು, ಇದು ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಕಾರಿಯಾಗಿದೆ. ಆದರೆ, ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿಯಾಗಿದೆ.
ಈರುಳ್ಳಿಯ ಕೆಲವು ಗುಣಗಳನ್ನು ನೋಡೋಣ ಬನ್ನಿ
 
1. ನೆಗಡಿ, ಕೆಮ್ಮು ಕಫ‌ ಶಮನವಾಗುತ್ತದೆ
- ನೆಗಡಿ, ಕೆಮ್ಮು ಕಫ‌ಕ್ಕೆ 2 ಚಮಚ ಈರುಳ್ಳಿಯ ರಸಕ್ಕೆ 2 ಚಮಚ  ಜೇನು ತುಪ್ಪ 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ಕಫ‌ ಶಮನವಾಗುತ್ತದೆ.
- ಮಕ್ಕಳಿಗೆ ಇಡೀ ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ಸೇವಿಸಲು ನೀಡಿದರೆ ಕೆಮ್ಮು ಕಫ‌ ನಿವಾರಣೆಯಾಗುತ್ತದೆ.
- ಈರುಳ್ಳಿ ರಸ ಮತ್ತು ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿ.
 
2. ಜೀರ್ಣಶಕ್ತಿ ವೃದ್ಧಿಯಾಗುತ್ತದೆ
- ಈರುಳ್ಳಿ ಹೂವುಗಳನ್ನು ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಯಾಗುತ್ತದೆ
- ಈರುಳ್ಳಿಯನ್ನು ಕತ್ತರಿಸಿ ಹಸಿಯಾಗಿ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಯಾಗುತ್ತದೆ
- ಈರುಳ್ಳಿಯನ್ನು ಕತ್ತರಿಸಿ ಬೆಲ್ಲ, ತುಪ್ಪ ಬೆರೆಸಿ ಸೇವಿಸಿದರೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
 
3. ಹೊಟ್ಟೆನೋವು ಶಮನವಾಗುತ್ತದೆ
- 1 ಚಮಚ ಈರುಳ್ಳಿ ರಸಕ್ಕೆ 4 ಚಿಟಿಕೆ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆನೋವು ಶಮನವಾಗುತ್ತದೆ.
- ಉಷ್ಣತೆಯಿಂದಾಗುವ ಹೊಟ್ಟೆನೋವಿಗೆ ತುಪ್ಪದಲ್ಲಿ ಹುರಿದ ಈರುಳ್ಳಿಯನ್ನು ಊಟದ ಮೊದಲು ಸೇವಿಸಬೇಕು.
 
4. ಕೂದಲು ಸೊಂಪಾಗಿ ಬೆಳೆಯಲು
- ಈರುಳ್ಳಿಯನ್ನು ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಶ್ಯಾಂಪೂ ಬಳಸಿ ತಲೆ ತೊಳೆಯಿರಿ.
- ಬಿಸಿ ನೀರಿನೊಂದಿಗೆ ಈರುಳ್ಳಿ ರಸವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಶ್ಯಾಂಪೂ ಬಳಸಿದ ಮೇಲೆ ಸ್ನಾನದ ಕೊನೆಯ ಹಂತದಲ್ಲಿ ಬಳಸಿ.
- ಮೊಸರು ನೈಸರ್ಗಿಕವಾದ ಕಂಡೀಷನರ್, ಮೊಸರು ಜೊತೆ ಈರುಳ್ಳಿ ರಸ ಮಿಕ್ಸ್ ಮಾಡಿ ಹಚ್ಚಿದರೆ ಕೂದಲು ಮೃದುವಾಗಿ, ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆ ಹೊಟ್ಟು, ತಲೆ ತುರಿಕೆ ಕಡಿಮೆಯಾಗುತ್ತದೆ.
 
5. ಮೂಲವ್ಯಾಧಿಯನ್ನು ಗುಣಪಡಿಸುತ್ತದೆ
- ಈರುಳ್ಳಿಯನ್ನು ಮೊಸರಿನೊಂದಿಗೆ ಜಜ್ಜಿ ಸೇವಿಸಿ
- ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಅದನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಳಿಯಲ್ಲಿ ಕೆಲಸ ಮಾಡುವವರ ಸೆಕ್ಸ್ ಲೈಫ್ ಅಧೋಗತಿಯಾಗಲು ಕಾರಣವೇನು ಗೊತ್ತಾ?