Publish Date: Wed, 06 Jun 2018 (08:50 IST)
Updated Date: Wed, 06 Jun 2018 (08:51 IST)
ಬೆಂಗಳೂರು: ಇಂದಿನ ಜೀವನ ಶೈಲಿಯೇ ಹಾಗಿದೆ. ಹಲವು ವೃತ್ತಿಗಳಲ್ಲಿ ಪಾಳಿ ಆಧಾರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇನ್ನು ಕೆಲವರಿಗೆ ಒಂದು ವಾರ ರಾತ್ರಿ ಇನ್ನೊಂದು ವಾರ ಹಗಲು ಈ ರೀತಿ ಬೇರೆ ಬೇರೆ ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.
ಆದರೆ ಹೀಗೆ ಮಾಡುವುದರಿಂದ ಸೆಕ್ಸ್ ಲೈಫ್ ಜತೆಗೆ ಪುರುಷರ ಪುರುಷತ್ವಕ್ಕೂ ಕುತ್ತು ಬರುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಆಗಾಗ ಶಿಫ್ಟ್ ಚೇಂಜ್ ಮಾಡುವುದರಿಂದ ಪುರುಷರಲ್ಲಿ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಕೊರತೆಯಾಗುತ್ತದೆ. ಇದರಿಂದ ಮಕ್ಕಳಾಗುವುದಕ್ಕೆ ಸಮಸ್ಯೆಯಾಗುತ್ತದೆ. ಹಾಗಾಗಿ ಇಂತಹ ಕೆಲಸ ಮಾಡುವವರು ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾದರೂ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎಂದು ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.