Publish Date: Thu, 12 Jul 2018 (17:45 IST)
Updated Date: Thu, 12 Jul 2018 (17:50 IST)
ಆ ವೃದ್ದೆ ತನ್ನ ಪಾಡಿಗೆ ತಾನು ಹೊರಟಿದ್ದರು. ಆದರೆ ದಾರಿಯಲ್ಲಿ ಪರ್ಸ್ ಬಿಸಾಕಿದ್ದ ಕಳ್ಳರು, ಪರ್ಸ್ ಕೆಳಗೆ ಬಿದ್ದಿದೆ ಎಂದು ವೃದ್ಧೆಯನ್ನು ಯಾಮಾರಿಸಿದ್ದಾರೆ. ವೃದ್ಧೆ ಪರ್ಸ ನೋಡಲು ಕೆಳಗೆ ಬಗ್ಗಿದಾಗ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.
ವೃದ್ಧೆಯೊಬ್ಬರನ್ನು ಯಾಮಾರಿಸಿ ಚಿನ್ನದ ಸರ ಕಿತ್ತೊಯದ್ದ ಕಳ್ಳರು ತಮ್ಮ ಚಾಲಾಕಿತನ ತೋರಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಿಕ್ಕನಹಳ್ಳಿ ಗ್ರಾಮದ ಗೌರಮ್ಮ ಸರಳ ಕಳೆದುಕೊಂಡ ವೃದ್ಧೆಯಾಗಿದ್ದಾರೆ. ಕೆಳಗೆ ಬಿದ್ದಿದ್ದ ಪರ್ಸ್ ತೋರಿಸಿ 40 ಗ್ರಾಂ ಚಿನ್ನದ ಸರವನ್ನು ಕಳ್ಳರು ತಮ್ಮ ಕರಾಮತ್ತು ತೋರಿ ಕದ್ದೊಯ್ದಿದ್ದಾರೆ. ಈ ಕುರಿತು ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.