Publish Date: Wed, 11 Jul 2018 (18:03 IST)
Updated Date: Wed, 11 Jul 2018 (18:09 IST)
ಹೋಂ ಮಿನಿಸ್ಟರ್ ಆದ್ರೆನೂ, ಪವರ್ ಮಿನಿಸ್ಟರ್ ಆದ್ರೆನೂ, ನಮ್ದೆ ಹವಾ... ಅಂತ ಕೈ ಚಳಕ ತೋರೊ ಕಳ್ಳರು. ಗೃಹಸಚಿವರ ಮನೆ ಮುಂದೆಯೇ ದರೋಡೆ ನಡೆಸಿದ್ದಾರೆ.
ಚಾಕು ತೋರಿಸಿ ಹಣ, ಮೊಬೈಲ್ ಕಿತ್ತ ಕಿರಾತಕರು ಪರಾರಿಯಾಗಿದ್ದಾರೆ. ಗೃಹಸಚಿವ ಪರಮೇಶ್ವರ ಸದಾಶಿವನಗರ ನಿವಾಸದ ಮುಂದೆಯೇ ಘಟನೆ ನಡೆದಿದೆ. ಹೋಂ ಮಿನಿಸ್ಟರ್ ಮನೆ ಮುಂದೇನೆ ಹೀಗಾದ್ರೆ ರಾಜ್ಯದ ಬೇರೆ ಭಾಗಗಳಲ್ಲಿ ಪೊಲೀಸ್ ಭದ್ರತೆ ಹೇಗೆ..? ಎಂಬ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ. ಹೋಂ ಮಿನಿಸ್ಟರ್ ಮನೆಮುಂದೆ ಪೊಲೀಸ್ ಎಸ್ಕಾರ್ಟ್ ವಾಹನ ಇದ್ರು ಡೊಂಟ್ ಕೇರ್ ಎಂದ ಕಳ್ಳರು. ಸದಾಶಿವನಗರ ರಾಜಕೀಯ ನಾಯಕರು, ಉದ್ಯಮಿಗಳು ಸಿನಿಮಾತಾರೆಯರು ವಾಸವಾಗಿರೋ ಪ್ರತಿಷ್ಟಿತ ಏರಿಯಾ ಆಗಿದೆ.
ಕಳೆದ ಜುಲೈ 6 ರಾತ್ರಿ 9.30 ರ ವೇಳೆಗೆ ರಘು ಎಂಬಾತ ಗೃಹಮಂತ್ರಿಗಳ ಭೇಟಿಯಾಗಿ ಹೊರಬಂದಿದ್ದಾರೆ. ಗೃಹಮಂತ್ರಿಗಳ ಸ್ವಕ್ಷೇತ್ರ ಕೊರಟಗೆರೆಯಿಂದ ಬಂದಿದ್ದ ರಘು. ಮನೆಯಿಂದ ಹೊರಬಂದು ಮೆಜೆಸ್ಟಿಕ್'ಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿ ನಿಂತಿದ್ದ. ಈ ವೇಳೆ ಡಿಯೋ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರಿಂದ ಚಾಕು ತೋರಿಸಿ ದರೋಡೆ ಮಾಡಿ, ಕೈ ಚಳಕ ತೋರಿದ್ದಾರೆ.
ರಘು ಬಳಿಯಿದ್ದ ಓಪೊ ಫೊನ್ ಜೇಬಲಿದ್ದ ಹತ್ತು ಸಾವಿರ ಹಣ ಕಿತ್ತೊಯ್ದ ಕಳ್ಳರು. ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.