Publish Date: Mon, 16 Jul 2018 (17:19 IST)
Updated Date: Mon, 16 Jul 2018 (17:21 IST)
ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಉತ್ತರ ಕರ್ನಾಟಕಕ್ಕೆ ಈವರೆಗೂ ಬಿಡುಗಡೆಯಾದ ಅನುದಾನದ ಬಗ್ಗೆ ನಾಳೆಯೇ ಶ್ವೇತಪತ್ರವನ್ನ ಹೊರಡಿಸಲಿ. ಶ್ವೇತಪತ್ರ ಹೊರಡಿಸಿದ್ದೇ ಆದಲ್ಲಿ ಎಲ್ಲವೂ ಹೊರಬೀಳಲಿದೆ. ರಾಜ್ಯದಲ್ಲಿ ರಚನೆಯಾಗಿರುವ 50 ತಾಲೂಕುಗಳಿಗೆ ಶೀಘ್ರವೇ 5 ಕೋಟಿ ಮೀಸಲಿಡಲಿ. ಮಹದಾಯಿ ಬಗ್ಗೆ ಮಾತನಾಡುವವರು ಭೂಮಿಪೂಜೆ ಮಾಡಿದಾಗ ಯಾಕೆ ಆಗಮಿಸಲಿಲ್ಲ? ಎಂದು ಪ್ರಶ್ನಿಸಿದರು.
ಹಾಸನ ಮಂಡ್ಯ ಮೈಸೂರು ಭಾಗಕ್ಕೆ ಮಾತ್ರ ಬಜೆಟ್ ಮಂಡನೆಗೆ ಹಣ ತೆಗೆದುಕೊಂಡು ಹೋದಂತಾಗಿದೆ ಎಂದ ಅವರು, ಉತ್ತರ ಕರ್ನಾಟಕದ ಬಗ್ಗೆ ಸಿಎಂ ಕುಮಾರಸ್ವಾಮಿ ಅವರಿಗೆ ಕಾಳಜಿ ಇದ್ರೆ ಕಳಸಾ- ಬಂಡೂರಿ ವಿಚಾರವಾಗಿ ಏಕೆ ಮೌನ ಮುರಿಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.