ಬೆಂಗಳೂರು: ನಿನ್ನೆ ಕಾಂಗ್ರೆಸ್ ನಾಯಕ, ಸಚಿವ ಡಿಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ಪಕ್ಷಕ್ಕೆ ಶಾಕ್ ಕೊಟ್ಟಿದ್ದ ಬಿಜೆಪಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಗೂಳಿ ಹಟ್ಟಿ ಶೇಖರ್ ಇಂದು ಕಲಾಪಕ್ಕೂ ಗೈರಾಗಿದ್ದಾರೆ.
									
			
			 
 			
 
 			
					
			        							
								
																	ನಿನ್ನೆ ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಡಿಕೆ ಶಿವಕುಮಾರ್ ಜೆಡಿಎಸ್, ಕಾಂಗ್ರೆಸ್ ಸಚಿವರು, ಸಂಸದರು, ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ವಿಶೇಷವೆಂದರೆ ಈ ಔತಣ ಕೂಟಕ್ಕೆ ಬಿಜೆಪಿಯ ಗೂಳಿ ಹಟ್ಟಿ ಶೇಖರ್ ಮತ್ತು ಬಾಲಚಂದ್ರ ಜಾರಕಿಹೊಳಿ ಆಗಮಿಸಿ ಕುತೂಹಲ ಮೂಡಿಸಿದ್ದರು.
									
										
								
																	ಈ ಹಿನ್ನಲೆಯಲ್ಲಿ ಇವರ ರಾಜಕೀಯ ನಡೆ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಅದರ ಬೆನ್ನಲ್ಲೇ ಇಂದು ವಿಧಾನಸಭೆ ಕಲಾಪಗಳಿಗೆ ಇಬ್ಬರೂ ಗೈರಾಗಿರುವುದು ಮತ್ತಷ್ಟು ಅನುಮಾನ ಮೂಡಿಸಿದೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.