ಡಿಸಿಎಂ ಹುದ್ದೆ ಬರುತ್ತೆ, ಹೋಗುತ್ತೆ, ಮೊದಲು ಪಕ್ಷ ನೋಡಿಕೊಳ್ಳಿ: ಪರಮೇಶ್ವರ್ ಗೆ ಎಚ್ ಕೆ ಪಾಟೀಲ್ ತರಾಟೆ

ಬುಧವಾರ, 11 ಜುಲೈ 2018 (11:55 IST)
ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಾಗಿದ್ದು, ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ಡಿಸಿಎಂ ಪರಮೇಶ್ವರ್ ವಿರುದ್ಧವೇ ಕಿಡಿ ಕಾರಿದ್ದಾರೆ.

ನೀವು 8 ವರ್ಷದಿಂದ ಪಕ್ಷದ ಅಧ್ಯಕ್ಷರಾಗಿದ್ದವರು. ನಿಮಗೆ ಪಕ್ಷಕ್ಕಿಂತ ಅಧಿಕಾರ ದೊಡ್ಡದಾಗಬಾರದು. ಡಿಸಿಎಂ ಹುದ್ದೆ ಇಂದು ಬರುತ್ತೆ, ನಾಳೆ ಹೋಗುತ್ತೆ. ಪಕ್ಷದ ಬುಡ ಮರೆಯಬಾರದು ಎಂದು ಎಚ್ ಕೆ ಪಾಟೀಲ್ ಬಜೆಟ್ ನಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ, ಸಿಎಂ ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಏಕೆ ಓಕೆ ಅಂತಿದ್ದೀರಾ ಎಂದೂ ಪರಮೇಶ್ವರ್ ರನ್ನು ತರಾಟೆಗೆ ತೆಗೆದುಕೊಂಡರು. ಹಾಸನ, ರಾಮನಗರಕ್ಕೆ ಮಾತ್ರ ಎಲ್ಲಾ ಯೋಜನೆನಾ? ಅವರು ಹೇಳಿದ್ದಕ್ಕೆ ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಿದ್ದರೆ ಹೇಗೆ ಎಂದು ಗರಂ ಆಗಿ ಕೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ ಕೆ ಪಾಟೀಲ್ ರೋಷಾವೇಷ