ಲಾಕಪ್ ಡೆತ್ ಪ್ರಕರಣ: ಮೃತನ ಕುಟುಂಬಕ್ಕೆ ಪರಿಹಾರ

ಸೋಮವಾರ, 16 ಜುಲೈ 2018 (18:57 IST)
ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಈಚೆಗೆ ನಡೆದಿದ್ದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಕಪ್ ಡೆತ್ ಆಗಿದ್ದ ಮದ್ದೂರಿನ ಮೂರ್ತಿ ಎಂಬಾತನ ಇಬ್ಬರು ಪತ್ನಿಯರಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಎರಡು ಲಕ್ಷ ಪರಿಹಾರ ಹಣ ನೀಡಿದರು.

ಕಳೆದ ಜುಲೈ 13ರಂದು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ ಆರೋಪದಲ್ಲಿ ಬಂಧಿತನಾಗಿದ್ದ ಮದ್ದೂರಿನ ಬೆಳ್ತೂರು ಗ್ರಾಮದ ಮೂರ್ತಿ ಲಾಕಪ್ ಡೆತ್ ಆಗಿದ್ದ. ಪ್ರಕರಣವನ್ನು ಮಂಡ್ಯ ಜಿಲ್ಲಾಡಳಿತ ಸಿಐಡಿ ತನಿಖೆಗೆ ವಹಿಸಿತ್ತು.

ಮೃತ ಮೂರ್ತಿಗೆ ಇಬ್ಬರು ಪತ್ನಿಯರಿದ್ದು, ಇಬ್ಬರಿಗೂ ತಲಾ ಒಂದೊಂದು ಲಕ್ಷವನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಮಂಡ್ಯದಲ್ಲಿ ವಿತರಣೆ ಮಾಡಿದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹುಚ್ಚು ನಾಯಿ ದಾಳಿ: 10 ಜನರಿಗೆ ಗಾಯ