Select Your Language

Notifications

webdunia
webdunia
webdunia
webdunia

ಮೊಮೊ ಸೂಸೈಡ್ ಗೇಮ್ ಗೆ ಭಾರತದಲ್ಲಿ ಮೊದಲ ಬಲಿ

ಮೊಮೊ ಸೂಸೈಡ್ ಗೇಮ್ ಗೆ ಭಾರತದಲ್ಲಿ  ಮೊದಲ ಬಲಿ
ಅಜ್ಮೀರ್ , ಬುಧವಾರ, 22 ಆಗಸ್ಟ್ 2018 (16:03 IST)
ಅಜ್ಮೀರ್ : ಅಪಾಯಕಾರಿ ಮೊಮೊ ಸೂಸೈಡ್ ಗೇಮ್ ನಿಂದಾಗಿ ಇದೀಗ ಭಾರತದಲ್ಲಿ ಹದಿನಾರು ವರ್ಷದ ವಿದ್ಯಾರ್ಥಿನಿಯೊಬ್ಬಳು  ಬಲಿಯಾಗಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.


ಈ ಅಪಾಯಕಾರಿ ಗೇಮ್ ನಿಂದಾಗಿ ವಿದೇಶದಲ್ಲಿ ಹಲವರು ಬಲಿಯಾಗಿದ್ದರು, ಆದರೆ ಭಾರತದಲ್ಲಿ ಇದೇ ಮೊದಲ ಬಾರಿಗೆ ರಾಜಸ್ತಾನದ ಅಜ್ಮೀರ್ ನಲ್ಲಿ ವಿದ್ಯಾರ್ಥಿನಿ  ಬಲಿಯಾಗಿದ್ದಾಳೆ. ಈಕೆ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯ ಸಹೋದರ ಆಕೆ ಮೊಮೊ ಗೇಮ್ ಆಡುತ್ತಿದ್ದಳು ಎಂದು ತಿಳಿಸಿದ್ದಾನೆ.


ಆದರೆ ಆಕೆ ಮೊಮೊ ಗೇಮ್ ನಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ? ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.ರಾಜಸ್ತಾನ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಒಂದು ವೇಳೆ ಆಕೆ ಮೊಮೊ ಗೇಮ್ ನಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಸಾಬೀತಾದರೆ ಮೊಮೊ ಚಾಲೆಂಜ್ ಗೆ ಭಾರತದ ಮೊದಲ ಬಲಿ ಇದಾಗಲಿದೆ. ಆದರೆ ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ತನಿಖೆ ಪೂರ್ಣಗೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗು-ಕೇರಳ ಪ್ರವಾಹ: ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ