Select Your Language

Notifications

webdunia
webdunia
webdunia
webdunia

ಮಂಗಳೂರಿನಲ್ಲೊಂದು ಭೀಕರ ಅಪಘಾತ, ಮಹಿಳೆ, ಬೈಕ್ ಸವಾರ ಬದುಕಿದ್ದೇ ಪವಾಡ: ವಿಡಿಯೋ

Mangalore accident

Krishnaveni K

ಮಂಗಳೂರು , ಶುಕ್ರವಾರ, 14 ಮಾರ್ಚ್ 2025 (14:18 IST)
ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಮಹಿಳೆ ಮತ್ತು ಬೈಕ್ ಸವಾರನೊಬ್ಬ ಬದುಕುಳಿದಿದ್ದೇ ಅದೃಷ್ಟ ಎನ್ನಬಹುದು.
 

ಸಿಸಿಟಿವಿ ಕ್ಯಾಮರಾಗಳಲ್ಲಿ ಈ ಅಪಘಾತದ ದೃಶ್ಯ ದಾಖಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಗಮನಿಸಿದರೆ ಇದು ಆಕ್ಸಿಡೆಂಟಾ ಬೇಕೆಂದೇ ಮಾಡಿದ ಕೃತ್ಯವೇ ಎಂಬ ಅನುಮಾನ ಮೂಡಿಸುವಂತಿದೆ.

ಜನವಸತಿ ರಸ್ತೆಯಲ್ಲಿ ಮಹಿಳೆಯೊಬ್ಬರು ಕೈಯಲ್ಲಿ ಕ್ಯಾರೀ ಬ್ಯಾಗ್ ಹಿಡಿದುಕೊಂಡು ರಸ್ತೆಯ ಬದಿಯಲ್ಲೇ ನಡೆದುಕೊಂಡು ಹೋಗುತ್ತಿದ್ದಾರೆ. ಆಗ ಎದುರಿನಿಂದ ಬರುವ ಕಾರು ಮೊದಲು ಎದುರಿದ್ದ ಬೈಕ್ ಗೆ ನುಗ್ಗಿ ನೂಕಿಕೊಂಡೇ ವೇಗವಾಗಿ ಬರುತ್ತದೆ. ಅದರ ಜೊತೆಗೆ ಬೈಕ್ ಮತ್ತು ಕಾರಿನ ನಡುವೆ ಮಹಿಳೆ ಕೂಡಾ ಸಿಲುಕಿ ಪಕ್ಕದ ಕಂಪೌಂಡ್ ಢಿಕ್ಕಿ ಹೊಡೆದು ನೇತಾಡುತ್ತಾಳೆ.

ಈ ಭಯಾನಕ ಅಪಘಾತದ ದೃಶ್ಯ ಎದೆ ಝಲ್ಲೆನಿಸುವಂತಿದೆ. ತಕ್ಷಣವೇ ಅಲ್ಲಿರುವ ಸ್ಥಳೀಯರು ಕಂಪೌಂಡ್ ಗೆ ಸಿಕ್ಕಿ ನೇತಾಡುತ್ತಿರುವ ಮಹಿಳೆಯನ್ನು ರಕ್ಷಿಸುತ್ತಾರೆ. ಬೈಕ್ ಸವಾರ ಸ್ವಲ್ಪ ದೂರದಲ್ಲಿ ಬಿದ್ದಿರುತ್ತಾನೆ. ಆತನೂ ಬದುಕುಳಿಯುತ್ತಾನೆ. ಈ ಭಯಾನಕ ಅಪಘಾತದ ವಿಡಿಯೋ ಇಲ್ಲಿದೆ ನೋಡಿ.
 


Share this Story:

Follow Webdunia kannada

ಮುಂದಿನ ಸುದ್ದಿ

ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಹೈಕೋರ್ಟ್‌ನಿಂದ ರಿಲೀಫ್‌