ಬೆಂಗಳೂರು: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ವರ್ಷಕ್ಕೆ ಎಷ್ಟು ದಿನ ಅಂತಾನೇ ಸರಿಯಾಗಿ ಗೊತ್ತಿಲ್ವಂತೆ. ಹೀಗೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುತ್ತಾರೆ. ಈ ವೇಳೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾತನಾಡುತ್ತಾರೆ. ಈ ವೇಳೆ ವರ್ಷಕ್ಕೆ ಒಟ್ಟು ಎಷ್ಟು ದಿನ ಎಂದು ಹೇಳುವಾಗ ಅವರು ಫುಲ್ ಕನ್ ಫ್ಯೂಸ್ ಆಗುತ್ತಾರೆ.
ಮೊದಲು 354 ಎಂದು ನಂತರ 364 ಎನ್ನುತ್ತಾರೆ. ಬಳಿಕ ಸಭಿಕರ ಬಳಿಕ ಎಷ್ಟು ದಿನ ಎಂದು ಕೇಳುತ್ತಾರೆ. ಕೆಲವರು 354 ಎಂದರೆ 364 ಎನ್ನುತ್ತಾರೆ. ಆಗ ಸಚಿವರು ನಾನು ಮ್ಯಾಥ್ಸು ಸ್ವಲ್ಪ ವೀಕ್ ಎನ್ನುತ್ತಾರೆ. ಮತ್ತೆ 364 ಎಂದಾಗ ಕೆಲವರು ಇಲ್ಲಾ 354 ಎನ್ನುತ್ತಾರೆ. ಆಗ ನಾನು ಪಾಪ.. ನೀವೇ ನನ್ನ ಕನ್ ಫ್ಯೂಸ್ ಮಾಡ್ತಿದ್ದೀರಿ ಈಗ ಎನ್ನುತ್ತಾರೆ. ಬಳಿಕ ಹೋಗ್ಲಿ ವರ್ಷವಿಡೀ ಎಂದು ಮಾತು ಮುಂದುವರಿಸುತ್ತಾರೆ.
ಅವರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗಿದೆ. ಸಚಿವರಾಗಿದ್ದುಕೊಂಡ ವರ್ಷಕ್ಕೆ ಎಷ್ಟು ದಿನ ಅಂತಾನೇ ಅವರಿಗೆ ಗೊತ್ತಿಲ್ಲ ಪಾಪ.. ಅದಕ್ಕೇ ಗೃಹಲಕ್ಷ್ಮಿ ಹಣ ಹಾಕುವಾಗಲೂ ತಾರೀಖು ವ್ಯತ್ಯಾಸವಾಗುತ್ತಿರುತ್ತದೆ ಎಂದು ಟ್ರೋಲ್ ಮಾಡಿದ್ದಾರೆ. ಅವರ ಈ ವಿಡಿಯೋ ಇಲ್ಲಿದೆ ನೋಡಿ.