ಮಂಗಳೂರು: ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಉಳ್ಳಾಲದ ಕುತ್ತಾರಿನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲಿಯವರೆಗೆ ಲವ್ ಜಿಹಾದ್ ಬಗ್ಗೆ ಮಾತನಾಡೋಣ, ಸ್ವಲ್ಪ ಬದಲಾವಣೆ ತರೋಣ. ನಮ್ಮ ಹುಡುಗರಿಗೂ ಹೇಳೋಣ. ಪಾಪ ಎಷ್ಟು ದಿನ ಅಂತ ಮದುವೆಯಾಗಿಲ್ಲ, ಹುಡುಗಿ ಸಿಕ್ತಿಲ್ಲ ಎಂದು ಹೇಳೋಣ. ಎಷ್ಟು ದಿನ ಅಂತ ನಮ್ದೇ ಹೆಣ್ಣು ಮಕ್ಕಳನ್ನೇ ನೋಡೋಣ, ಸ್ವಲ್ಪ ಅನ್ಯಧರ್ಮದ ಬಗ್ಗೆಯೂ ನೋಡೋಣ ಎಂದಿದ್ದಾರೆ.
ನಮ್ಮ ಸಮಾಜದಲ್ಲಿ ಹೆಣ್ಣು ಸಿಕ್ತಿಲ್ಲ ಎಂದು ಹೇಳುವಾಗ ಪಕ್ಕದ ಸಮಾಜದಲ್ಲೂ ಅದೇ ಸಮಸ್ಯೆಯಿದೆಯಲ್ಲಾ. ಧೈರ್ಯ ತುಂಬ್ರಲ್ಲಾ ಎಂದು ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅವರು ಹಿಂದೂ ಸಮಾಜದ ಉದ್ದಾರಕ್ಕೆ ಮೂರು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದೂ ಸಲಹೆ ನೀಡಿದ್ದಾರೆ.
ಉದ್ಯಮಿಗಳು ನಿಮ್ಮ ಬಳಿ ಕೆಲಸ ಮಾಡುವರಿಗೆ ಮೂರನೇ ಮಗು ಮಾಡಿಕೊಳ್ಳಲು ಆಫರ್ ಕೊಡಿ ಎಂದು ಹೇಳಿದ್ದಾರೆ. ಎಲ್ಲರಿಗೂ ಮಕ್ಕಳ ವಿದ್ಯಾಭ್ಯಾಸದ್ದೇ ಅಲ್ವಾ ಸಮಸ್ಯೆ? ನೀವು ಯಾರು ಯಾರು ನಿಮ್ಮ ಮನೆಯಲ್ಲಿ, ತೋಟದಲ್ಲಿ ಕೆಲಸ ಮಾಡುವವರಿಗೆ ಆಫರ್ ಕೊಡಿ. ನಾನು ಕೆಲಸಕ್ಕೆ ಇಟ್ಟುಕೊಳ್ಳಬೇಕು ಎಂದರೆ ಮೂರು ಮಕ್ಕಳನ್ನು ಮಾಡಬೇಕು ಎಂದು ಕಂಡೀಷನ್ ಹಾಕಿ. ಒಂದು ವೇಳೆ ನೀನು ಮೂರನೇ ಮಗು ಮಾಡಿಕೊಂಡರೆ ಅದರ ವಿದ್ಯಾಭ್ಯಾಸದ ಖರ್ಚು, ನೋಡಿಕೊಳ್ಳುವ ಖರ್ಚು ನಾನು ಮಾಡ್ತೇನೆ ಎಂದು ಮುಂದೆ ಬನ್ರಿ ಅಲ್ಲಾ.. ಎಂದು ಚಾಲೆಂಜ್ ನೀಡಿದ್ದಾರೆ. ಹಿಂದೂ ಸಮಾಜದ ಉದ್ದೇಶಕ್ಕೆ ಇದು ಅಗತ್ಯ ಎಂದಿದ್ದಾರೆ.