ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆಕೋರರ ಬಂಧನದ ಬಳಿಕ ಮಂಗಳೂರು ಪೊಲೀಸರ ಆರೋಪಿಗಳ ಖತರ್ನಾಕ್ ಪ್ಲ್ಯಾನ್ ಗಳನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ.
ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರೂ ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ. ಇವರನ್ನು ಈಗ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬಂಧನದ ಬಳಿಕ ಮಾಧ್ಯಮಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಒಟ್ಟು ಆರು ಮಂದಿ ದರೋಡೆಯಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ಮುರುಗಂಡಿ ದೇವರ್ ಮುಖ್ಯಸ್ಥನಾಗಿದ್ದ. ಮಹಾರಾಷ್ಟ್ರ ಮೂಲದ ಫೀಯೆಟ್ ಕಾರು ಬಳಸಿದ್ದರು. ದರೋಡೆ ಬಳಿಕ ಗೋಣಿ ಚೀಲದ ಜೊತೆಗೆ ಆರೋಪಿಗಳು 700 ಕಿ.ಮೀ. ಪ್ರಯಾಣ ಮಾಡಿದ್ದರು.
ತಮಿಳುನಾಡಿನ ತಿರುವನ್ವೇಲಿಗೆ ತೆರಳಿದ್ದಾರೆ. ಇಲ್ಲಿಯವರೆಗೂ ಮುರುಗಂಡಿ ದೇವರ್ ನೇ ಕಾರು ಚಲಾಯಿಸಿದ್ದ. ದರೋಡೆಗೆ ಈತ ಎರಡು ತಿಂಗಳಿನಿಂದ ಪ್ಲ್ಯಾನ್ ರೂಪಿಸಿದ್ದ. ಎರಡು ತಿಂಗಳ ಮೊದಲೇ ಮಂಗಳೂರಿಗೆ ಬಂದು ಕೋಟೆಕಾರ್ ಬ್ಯಾಂಕ್ ಸುತ್ತಮುತ್ತಲ ಪರಿಸರ ಗಮನಿಸಿದ್ದ.
ಎಲ್ಲಾ ಪ್ಲ್ಯಾನ್ ಮಾಡಿಕೊಂಡ ಮೇಲೆ ತಮಿಳುನಾಡಿಗೆ ಮರಳಿದ್ದ. ಅದಾದ ಬಳಿಕ ತನ್ನ ಸಹಚರರೊಂದಿಗೆ ದರೋಡೆಗೆ ಬಂದಿದ್ದ. ಈ ಪೈಕಿ ಓರ್ವ ಹೊರಗಿನಿಂದ ನಿಂತು ಸಹಾಯ ಮಾಡಿದ್ದ. ಉಳಿದ ಐವರು ದರೋಡೆಗೆ ಬಂದಿದ್ದರು. ಬಂಧಿತರಿಂದ ಈಗ ದರೋಡೆ ಮಾಡಿದ್ದ ಚಿನ್ನದ ಜೊತೆಗೆ ಪಿಸ್ತೂಲ್, ತಲ್ವಾರ್ ನನ್ನೂ ವಶಕ್ಕೆ ಪಡೆಯಲಾಗಿದೆ.