Select Your Language

Notifications

webdunia
webdunia
webdunia
webdunia

ಉಳ್ಳಾಲ ಬ್ಯಾಂಕ್ ದರೋಡೆ ಮಾಡಲು ಕಳ್ಳರ ಖತರ್ನಾಕ್ ಪ್ಲ್ಯಾನ್ ರಿವೀಲ್

Mangalore robery

Krishnaveni K

ಮಂಗಳೂರು , ಶನಿವಾರ, 18 ಜನವರಿ 2025 (14:07 IST)
Photo Credit: X
ಮಂಗಳೂರು: ಉಳ್ಳಾಲ ಬ್ಯಾಂಕ್ ದರೋಡೆ ಮಾಡಲು ಕಳ್ಳರ ಖತರ್ನಾಕ್ ಪ್ಲ್ಯಾನ್ ಒಂದೊಂದೇ ಬಯಲಾಗುತ್ತಿದೆ. ಪೊಲೀಸರ ದಿಕ್ಕುತಪ್ಪಿಸಲು ಕಳ್ಳರು ಸಾಕಷ್ಟು ಪ್ಲ್ಯಾನ್ ಮಾಡಿದ್ದರು. ಅದೀಗ ತನಿಖೆಯಲ್ಲಿ ಬಹಿರಂಗವಾಗುತ್ತಿದೆ.

ಸಿಎಂ ಸಿದ್ದರಾಮಯ್ಯ ಭೇಟಿ ಸಂದರ್ಭದಲ್ಲಿಯೇ ಕಳ್ಳರು ಹೊಂಚು ಹಾಕಿ ದರೋಡೆ ಮಾಡಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಗಮನವೆಲ್ಲಾ ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮದ ಮೇಲಿರುತ್ತದೆ ಎಂಬ ಕಾರಣಕ್ಕೆ ಇದೇ ದಿನವನ್ನು ಆರಿಸಿಕೊಂಡಿದ್ದರು.

ಇನ್ನು, ಕಳ್ಳತನ ಮಾಡಿದ ಮೇಲೆ ತಮ್ಮ ಗುರುತು ಪತ್ತೆಯಾಗದಂತೆ ಒಂದೇ ರೀತಿಯ ಎರಡು ಕಾರು ಬಳಕೆ ಮಾಡಿದ್ದರು. ಈ ಪೈಕಿ ಒಂದು ಕಾರು ಮಂಗಳೂರಿನ ಕಡೆಗೆ ತೆರಳಿದ್ದರೆ ಇನ್ನೊಂದು ಕಾರು ಕೇರಳದ ಕಡೆಗೆ ತೆರಳಿದೆ.

ಕಳ್ಳತನ ಮಾಡಿದ ಬಳಿಕ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಮೊಬೈಲ್ ನ್ನು ಮಂಗಳೂರು ನಗರದ ಕಡೆಗೆ ಬಂದು ಹೆಜಮಾಡಿ ಬಳಿ ಬಿಸಾಕಿ ಹೋಗಿದ್ದಾರೆ. ಪೊಲೀಸರು ಆ ಮೊಬೈಲ್ ಟ್ರೇಸ್ ಮಾಡಿದರೆ ಮಂಗಳೂರು ಕಡೆಗೆ ಆರೋಪಿಗಳಿದ್ದಾರೆ ಎಂದು ದಿಕ್ಕುತಪ್ಪಿಸಲು ಈ ಪ್ರಯತ್ನ ನಡೆಸಿರುವ ಸಾಧ್ಯತೆಯಿದೆ.

ಹೀಗಾಗಿ ಹಣವಿರುವ ಡಕಾಯಿತರ ಕಾರು ಕೇರಳ ಕಡೆಗೆ ಹೋಗಿರಬಹುದೇ ಅಥವಾ ಮಂಗಳೂರು ಕಡೆಗೆ ಹೋಗಿರಬಹುದೇ ಎಂದು ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕೇರಳಕ್ಕೂ ಪೊಲೀಸರ ತಂಡ ಹೋಗಿ ಪರಿಶೀಲನೆ ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ತಂದೆಯನ್ನು ಜೈಲಿಗೆ ಕಳುಹಿಸಿದ್ದೇ ಅವರು: ಯತ್ನಾಳ್ ವಾಗ್ದಾಳಿ