ಮಂಗಳೂರು: ಇತ್ತೀಚೆಗೆ ಕೋಟೆಕಾರ್ ಸಹಕಾರಿ ಬ್ಯಾಂಕ್ ನಲ್ಲಿ ನಡೆದ ದರೋಡೆಗೆ ಸಂಬಂದಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು ಇಂದು ಆರೋಪಿಗಳನ್ನು ಬ್ಯಾಂಕ್ ಗೆ ಕರೆತರಲಿದ್ದಾರೆ.
ಜನವರಿ 17 ರಂದು ಕೋಟೆಕಾರ್ ಸಹಕಾರಿ ಬ್ಯಾಂಕ್ ನಲ್ಲಿ ದರೋಡೆ ನಡೆದಿತ್ತು. ಘಟನೆ ನಡೆದ ಮೂರು ದಿನಗಳ ಬಳಿಕ ತಮಿಳುನಾಡಿನ ತಿರುವನ್ವೇಲಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರೆಲ್ಲರೂ ತಮಿಳುನಾಡು ಮೂಲದವರೆಂದು ಪತ್ತೆಯಾಗಿತ್ತು.
ಇದೀಗ ಬಂಧಿತರಿಂದ ಚಿನ್ನ, ನಗದು ವಶಪಡಿಸಿಕೊಳ್ಳಲಾಗಿದೆ. ಇಂದು ಪೊಲೀಸರು ದರೋಡೆಕೋರರನ್ನು ಸ್ಥಳ ಮಹಜರಿಗೆ ಬ್ಯಾಂಕ್ ಗೆ ಕರೆದೊಯ್ಯಲಿದ್ದಾರೆ. ಮೊನ್ನೆ ನಡೆದ ಘಟನೆಯನ್ನು ರಿಕ್ರಿಯೇಟ್ ಮಾಡಲಿದ್ದಾರೆ.
ಇದಕ್ಕೆ ಮೊದಲು ಕೆಸಿ ರೋಡ್ ನಲ್ಲಿ ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಓರ್ವ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ಮತ್ತೆ ಬಂಧಿಸಿದ್ದರು. ಇಂದೂ ಕೂಡಾ ಸ್ಥಳ ಮಹಜರು ವೇಳೆ ಬಿಗಿ ಭದ್ರತೆ ನೀಡಲಿದ್ದಾರೆ.