Publish Date: Fri, 25 Jun 2021 (09:15 IST)
Updated Date: Fri, 25 Jun 2021 (09:16 IST)
ಬೆಂಗಳೂರು: ಅನ್ ಲಾಕ್ 2.0 ಜಾರಿಯಾದ ಬಳಿಕ ಇಂದಿನಿಂದ ಕೆಎಸ್ ಆರ್ ಟಿಸಿ ಅಂತರ್ ರಾಜ್ಯ ಬಸ್ ಸಂಚಾರ ಆರಂಭಿಸಲಿದೆ.
ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ಕೆಎಸ್ ಆರ್ ಟಿಸಿ ಅಂತರ್ ರಾಜ್ಯ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಬೆಂಗಳೂರು, ಶಿವಮೊಗ್ಗ, ಮಂಗಳೂರಿನಿಂದ ಬಸ್ ಗಳು ಸಂಚರಿಸಲಿವೆ. ಮಹಾರಾಷ್ಟ್ರ, ಮುಂಬೈಗೂ ಬಸ್ ಸೇವೆ ಇರಲಿದೆ. ಮುಂಗಡವಾಗಿ ಬಸ್ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ.
ಇನ್ನು, ಬಿಎಂಟಿಸಿ ಕೂಡಾ ಈ ವಾರದಿಂದ ಬಸ್ ಸಂಚಾರ ಆರಂಭಿಸಿತ್ತು. ಇದೀಗ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಸಂಸ್ಥೆಗೆ ಆದಾಯ ಹರಿದುಬರುತ್ತಿದೆ.