Publish Date: Thu, 10 Jun 2021 (09:03 IST)
Updated Date: Thu, 10 Jun 2021 (09:04 IST)
ಮುಂಬೈ: ಪ್ರಧಾನಿ ಮೋದಿ ಉದ್ದ ಗಡ್ಡ ಕೆಲವರಿಗೆ ಇಷ್ಟವಾದರೆ, ಮತ್ತೆ ಕೆಲವರಿಂದ ಟೀಕೆಗೊಳಗಾಗಿದೆ. ಆದರೆ ಮಹಾರಾಷ್ಟ್ರದ ಚಾಯ್ ವಾಲಾನೊಬ್ಬ ಪ್ರಧಾನಿ ಮೋದಿಗೇ 100 ರೂ. ಮನಿ ಆರ್ಡರ್ ಮಾಡಿ ಗಡ್ಡ ತೆಗೆಸುವಂತೆ ಮನವಿ ಮಾಡಿದ್ದಾನೆ!
ಆದರೆ ಇದು ಪ್ರಧಾನಿ ಮೋದಿಗೆ ತನ್ನಂತಹ ಅಸಂಘಟಿತ ವಲಯಗಳ ಕಷ್ಟವನ್ನು ಮನವರಿಕೆ ಮಾಡಲು ಈ ರೀತಿ ಮಾಡಿದ್ದಾನೆ. ಕೊರೋನಾ, ಲಾಕ್ ಡೌನ್ ಸಂಕಷ್ಟದಿಂದಾಗಿ ತನ್ನಂತಹ ಬಡ ವ್ಯಾಪಾರಿಗಳು ಬೀದಿ ಪಾಲಾಗಿದ್ದಾರೆ ಎಂದು ಆತ ಈ ರೀತಿಯಾಗಿ ಟಾಂಗ್ ಕೊಟ್ಟಿದ್ದಾನೆ.
ಪ್ರಧಾನಿ ಮೋದಿ ಗಡ್ಡ ಬೆಳೆಸುವ ಬದಲು ಉದ್ಯೋಗಾವಕಾಶ ಬೆಳೆಸಲು ಕ್ರಮ ಕೈಗೊಳ್ಳಬೇಕು. ಲಾಕ್ ಡೌನ್ ಸಂಕಷ್ಟದಿಂದ ಜನರು ಪಾರಾಗಲು ಕ್ರಮ ಕೈಗೊಳ್ಳಬೇಕು. ಕೊರೋನಾ ಲಸಿಕೆ ಹೆಚ್ಚು ಸಿಗುವಂತೆ ಮಾಡಬೇಕು ಎಂದು ಆತ ಹೇಳಿದ್ದಾನೆ.