Select Your Language

Notifications

webdunia
webdunia
webdunia
webdunia

ಯಾಸ್ ಚಂಡಮಾರುತ ಅಪ್ಪಳಿಸುವ ಹಿನ್ನಲೆ; ಅಧಿಕಾರಿಗಳ ಜೊತೆ ಇಂದು ಸಭೆ ಕರೆದ ಪ್ರಧಾನಿ ಮೋದಿ

ಯಾಸ್ ಚಂಡಮಾರುತ ಅಪ್ಪಳಿಸುವ ಹಿನ್ನಲೆ; ಅಧಿಕಾರಿಗಳ ಜೊತೆ ಇಂದು ಸಭೆ ಕರೆದ ಪ್ರಧಾನಿ ಮೋದಿ
ನವದೆಹಲಿ , ಭಾನುವಾರ, 23 ಮೇ 2021 (10:42 IST)
ನವದೆಹಲಿ : ತೌಕ್ವೆ ಚಂಡಮಾರುತದ ಬಳಿಕ ಯಾಸ್ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಪೂರ್ವ ಸಿದ್ಧತೆ ಕೈಗೊಳ್ಳಲು ಇಂದು ಪ್ರಧಾನಿ ಮೋದಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಮೇ.26ರಂದು ಯಾಸ್ ಚಂಡಮಾರುತ ತೀವ್ರ ಸ್ವರೂಪ ತಾಳಿ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ಇದರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ದೂರ ಸಂಪರ್ಕ, ವಿದ್ಯುತ್ , ನಾಗರಿಕ ವಿಮಾನಯಾನ, ಭೂ ವಿಜ್ಞಾನ  ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಅಮಿತ್ ಶಾ ಕೂಡ ಭಾಗವಹಿಸಲಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ವಿಚಾರಕ್ಕೆ ನಡೆಯಿತು ಕೊಲೆ