Publish Date: Mon, 17 May 2021 (09:34 IST)
Updated Date: Mon, 17 May 2021 (09:36 IST)
ನವದೆಹಲಿ: ಕೊರೋನಾ ದೇಶದೆಲ್ಲೆಡೆ ರುದ್ರತಾಂಡವವಾಡುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಂವಾದ ನಡೆಸಿದ್ದಾರೆ.
ಹೆಚ್ಚು ಪ್ರಕರಣಗಳಿರುವ ಉತ್ತರಪ್ರದೇಶ, ರಾಜಸ್ಥಾನ, ಛತ್ತೀಸ್ ಘಡ ಮತ್ತು ಪುದುಚೇರಿ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದಾರೆ.
ಮೊನ್ನೆಯಷ್ಟೇ ಕರ್ನಾಟಕ ಸಿಎಂ ಯಡಿಯೂರಪ್ಪ ಜೊತೆಗೂ ಸಂವಾದ ನಡೆಸಿದ್ದರು. ಅಲ್ಲದೆ ವೈದ್ಯಕೀಯ ಸೇವೆಗಳ ಪೂರೈಕೆ, ಕೊರೋನಾ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.