ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಗುರ್ಗಾಂವ್ ನ ಕೊರೋನಾ ರೋಗಿಗಳಿಗೆ ಆಕ್ಸಿಜನ್ ಕನ್ಸಂಟ್ರೇಟರ್ ಗಳನ್ನು ಒದಗಿಸುವ ಮೂಲಕ ನೆರವಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಿಖರ್ ಧವನ್, ನಮ್ಮ ಜನರಿಗೆ ಸಹಾಯ ಮಾಡುವಾಗ ಖುಷಿಯೇ ಬೇರೆ ಎಂದಿದ್ದಾರೆ. ಗುರ್ಗಾಂವ್ ಪೊಲೀಸರು ಧವನ್ ಸಹಾಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ನನ್ನ ಜನರಿಗೆ ಸಹಾಯ ಮಾಡಲು ಖುಷಿಯಾಗುತ್ತದೆ. ನಮ್ಮ ಜನರು, ಸಮಾಜಕ್ಕೆ ಮತ್ತಷ್ಟು ಸಹಾಯ ಮಾಡಲು ಸಿದ್ಧವಿದ್ದೇನೆ. ಭಾರತ ಈ ಕೊವಿಡ್ ಮಹಾಮಾರಿಯಿಂದ ಹೊರಬಂದು ಮೊದಲಿನಂತೆ ಬೆಳಗಲಿದೆ ಎಂದು ಧವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!