ನವದೆಹಲಿ: ಭಾರತ್ ಬಯೋಟೆಕ್ ನಿರ್ಮಿತ ಕೊರೋನಾ ವ್ಯಾಕ್ಸಿನ್ ಬ್ರಿಟನ್ ಮತ್ತು ಭಾರತೀಯ ತಳಿ ಕೊರೋನಾ ವಿರುದ್ಧವೂ ಪರಿಣಾಮಕಾರಿ ಎಂದು ಅಧ್ಯಯನ ವರದಿಯೊಂದು ಸಾಬೀತುಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಬಯೋಟೆಕ್ ಸಂಸ್ಥೆ ಬಿ.1.617 ಮತ್ತು ಬಿ1.1.7 ಸೇರಿದಂತೆ ಮೊದಲು ಭಾರತದಲ್ಲಿ ಪತ್ತೆಯಾದ ಮತ್ತು ಬ್ರಿಟನ್ ನಲ್ಲಿ ಪತ್ತೆಯಾದ ಕೊರೋನಾ ವಿರುದ್ಧವೂ ಪರಿಣಾಮಕಾರಿಯಾಗಿ ಕೋವ್ಯಾಕ್ಸಿನ್ ಕೆಲಸ ಮಾಡಬಲ್ಲದು ಎಂದಿದೆ.
ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮತ್ತು ಐಸಿಎಂಆರ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಇದು ತಿಳಿದುಬಂದಿದೆ. ಇದು ಕೋವ್ಯಾಕ್ಸಿನ್ ಗೆ ಸಿಕ್ಕ ಅಂತಾರಾಷ್ಟ್ರೀಯ ಮನ್ನಣೆ ಎಂದು ಬಯೋಟೆಕ್ ಹೇಳಿಕೊಂಡಿದೆ.