Publish Date: Thu, 24 Jun 2021 (16:40 IST)
Updated Date: Thu, 24 Jun 2021 (10:59 IST)
ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಫೈಟ್ ನಡೆಯುತ್ತಿದ್ದು, ಹೈಕಮಾಂಡ್ ನಿಂದ ಎಚ್ಚರಿಕೆ ಸಂದೇಶ ಬಂದರೂ ನಿಲ್ಲುವ ಲಕ್ಷಣ ತೋರುತ್ತಿಲ್ಲ.
ಹೀಗಾಗಿ ಈಗ ಹೈಕಮಾಂಡ್ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರನ್ನು ದೆಹಲಿಗೇ ಕರೆಸಿಕೊಂಡು ಮಾತುಕತೆ ನಡೆಸುವ ಸಾಧ‍್ಯತೆಯಿದೆ ಎನ್ನಲಾಗಿದೆ.
ಇಬ್ಬರೂ ನಾಯಕರ ಪರ ಬೆಂಬಲಿಗರು ತಮ್ಮ ನಾಯಕನೇ ಮುಂದಿನ ಸಿಎಂ ಎಂದು ಬಹಿರಂಗ ಹೇಳಿಕೆ ಕೊಡುತ್ತಾ ಪಕ್ಷಕ್ಕೆ ಮುಜುಗರವುಂಟು ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರೂ ನಾಯಕರು ಮತ್ತು ಬೆಂಬಲಿಗರನ್ನು ದೆಹಲಿಗೆ ಕರೆಸಿಕೊಂಡು ಮುಖಾಮುಖಿ ಸಭೆ ನಡೆಸಿ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡುವ ನಿರೀಕ್ಷೆಯಿದೆ.