Select Your Language

Notifications

webdunia
webdunia
webdunia
webdunia

ತಜ್ಞರು ಸಲಹೆ ನೀಡಿದ್ರೂ ಸದ್ಯಕ್ಕೆ ಶಾಲೆ ಆರಂಭಿಸಲ್ಲ ಎಂದು ಸಿಎಂ

ತಜ್ಞರು ಸಲಹೆ ನೀಡಿದ್ರೂ ಸದ್ಯಕ್ಕೆ ಶಾಲೆ ಆರಂಭಿಸಲ್ಲ ಎಂದು ಸಿಎಂ
ಬೆಂಗಳೂರು , ಬುಧವಾರ, 23 ಜೂನ್ 2021 (09:14 IST)
ಬೆಂಗಳೂರು: ಕೊರೋನಾ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಾಲೆ ಆರಂಭಿಸಲು ಸಲಹೆ ನೀಡಿತ್ತು.


ಹಂತ ಹಂತವಾಗಿ ಸಮ-ಬೆಸ ಆಧಾರದಲ್ಲಿ ಶಾಲೆ ಆರಂಭಿಸಬಹುದು ಎಂದು ತಜ್ಞರ ಸಮಿತಿ ಸಲಹೆ ನೀಡಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೇ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು.

ಇದೀಗ ಸ್ವತಃ ಸಿಎಂ ಯಡಿಯೂರಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಜ್ಞರು ಸಲಹೆ ನೀಡಿದರೂ, ಸದ್ಯಕ್ಕೆ ಶಾಲೆ ಆರಂಭಿಸಲ್ಲ ಎಂದಿದ್ದಾರೆ. ಸದ್ಯಕ್ಕೆ ಕೇವಲ ಕಾಲೇಜು ತೆರೆಯಲು ಅನುಮತಿ ನೀಡಲಾಗುವುದು. ಅದೂ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಿದ ಬಳಿಕವೇ ಕಾಲೇಜು ತೆರೆಯಲು ಅವಕಾಶ ನೀಡಲಾಗುವುದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಉಡುಪಿನ ಬಗ್ಗೆ ಕಾಮೆಂಟ್ ಮಾಡಿ ಟೀಕೆಗೊಳಗಾದ ಪಾಕ್ ಪಿಎಂ ಇಮ್ರಾನ್ ಖಾನ್