ಬೆಂಗಳೂರು: ನಿನ್ನೆ ಅನ್ ಲಾಕ್ ಆದ ಬೆನ್ನಲ್ಲೇ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರವೂ ಆರಂಭವಾಗಿತ್ತು. ಆದರೆ ಆರಂಭದ ದಿನವೇ ಪ್ರಯಾಣಿಕರು ಬಸ್ ಇಲ್ಲದೇ ಪರದಾಡುವಂತಾಗಿತ್ತು.
ಎಲ್ಲಾ ಬಸ್ ಗಳು ರಸ್ತೆಗಿಳಿಯದೇ ಇದ್ದಿದ್ದು, ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿದ್ದರಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಾಗಿತ್ತು. ಅಲ್ಲದೆ, ನೂಕುನುಗ್ಗಲು ಇತ್ತು. ಈ ಪ್ರಮಾದಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೇ ಸಾರಿಗೆ ಸಚಿವರು ಎಚ್ಚೆತ್ತುಕೊಂಡಿದ್ದಾರೆ.
ಮೊದಲ ದಿನ ಎಲ್ಲಾ ನೌಕರರೂ ಇನ್ನಷ್ಟೇ ಕರ್ತವ್ಯಕ್ಕೆ ಹಾಜರಾಗಬೇಕಿದೆ. ಅಲ್ಲದೆ, ಬಸ್ ಗಳ ಸಂಖ್ಯೆಯೂ ಕಡಿಮೆಯಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆದರೆ ಇಂದಿನಿಂದ ಎಲ್ಲಾ ಬಸ್ ಗಳು ಸಂಚರಿಸಲಿದ್ದು, ಇಂತಹ ಸಮಸ್ಯೆಯಾಗಲ್ಲ ಎಂದು ಭರವಸೆ ನೀಡಿದ್ದಾರೆ.