Select Your Language

Notifications

webdunia
webdunia
webdunia
webdunia

ಈ ವಾರದಿಂದ ಬೆಂಗಳೂರಲ್ಲೇ ಶುರು ಕಿರುತೆರೆ ಶೂಟಿಂಗ್

ಈ ವಾರದಿಂದ ಬೆಂಗಳೂರಲ್ಲೇ ಶುರು ಕಿರುತೆರೆ ಶೂಟಿಂಗ್
ಬೆಂಗಳೂರು , ಮಂಗಳವಾರ, 22 ಜೂನ್ 2021 (09:55 IST)
ಬೆಂಗಳೂರು: ಅನ್ ಲಾಕ್ 2.0 ರಲ್ಲಿ ರಾಜ್ಯ ಸರ್ಕಾರ ಕಿರುತೆರೆ ಮತ್ತು ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ.


ಹೀಗಾಗಿ ಈ ವಾರದಿಂದ ಬೆಂಗಳೂರಿನಲ್ಲೇ ಧಾರವಾಹಿ, ಕಿರುತೆರೆ ಶೋಗಳ ಶೂಟಿಂಗ್ ಶುರುವಾಗಿದೆ. ಲಾಕ್ ಡೌನ್ ವೇಳೆಯೂ ಧಾರವಾಹಿ ಹೊಸ ಎಪಿಸೋಡ್ ಗಳನ್ನು ಪ್ರಸಾರ ಮಾಡುವಲ್ಲಿ ಯಶಸ್ವಿಯಾಗಿತ್ತು.

ಎಲ್ಲಾ ವಾಹಿನಿಗಳ ಧಾರವಾಹಿ ತಂಡಗಳು ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಸಿ ಬೆಂಗಳೂರಿಗೆ ವಾಪಸಾಗಿದ್ದವು. ಸಾಕಷ್ಟು ಬ್ಯಾಂಕಿಂಗ್ ಎಪಿಸೋಡ್ ಇರುವ ಕಾರಣ ಇದುವರೆಗೆ ಕಿರುತೆರೆ ಪ್ರಸಾರಕ್ಕೆ ಅಡೆತಡೆಯಾಗಿಲ್ಲ. ಈ ವಾರದಿಂದ ಬೆಂಗಳೂರಿನ ಎಂದಿನ ಲೊಕೇಷನ್ ಗಳಲ್ಲಿಯೇ ಚಿತ್ರೀಕರಣ ಮುಂದುವರಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ ನಿಂದ ಡಾ.ರಾಜ್ ಕುಮಾರ್ ಗೆ ಅವಮಾನ