Publish Date: Wed, 16 Jun 2021 (09:55 IST)
Updated Date: Wed, 16 Jun 2021 (09:57 IST)
ಬೆಂಗಳೂರು: ಅರ್ಧಕ್ಕೇ ನಿಂತಿದ್ದ ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿ ಪುನರಾರಂಭವಾಗಲಿದೆ ಎಂಬ ಸುದ್ದಿ ಈಗ ಪಕ್ಕಾ ಆಗಿದೆ. ಈ ತಿಂಗಳ ಅಂತ್ಯಕ್ಕೇ ಬಿಗ್ ಬಾಸ್ ಪುನರಾರಂಭವಾಗಲಿದೆ.
ಇದಕ್ಕಾಗಿ ಸ್ಪರ್ಧಿಗಳು ಇದೇ ವಾರದಿಂದ ಕ್ವಾರಂಟೈನ್ ಗೊಳಗಾಗಲಿದ್ದಾರೆ ಎಂಬ ಮಾಹಿತಿ ಬಂದಿದೆ. ಒಟ್ಟು 12 ಸ್ಪರ್ಧಿಗಳು ಕ್ವಾರಂಟೈನ್ ಗೊಳಗಾಗಲಿದ್ದಾರೆ.
ಈಗಾಗಲೇ ಬಿಗ್ ಬಾಸ್ 72 ದಿನಗಳನ್ನು ಪೂರೈಸಿತ್ತು. ಇನ್ನು 28 ದಿನಗಳ ಯಾತ್ರೆ ಮುಂದುವರಿಯಲಿದೆ ಎನ್ನಲಾಗಿದೆ. ಇದರ ಬಗ್ಗೆ ಕಲರ್ಸ್ ವಾಹಿನಿ ಸದ್ಯದಲ್ಲೇ ಪ್ರಕಟಣೆ ನೀಡಲಿದೆ.