Select Your Language

Notifications

webdunia
webdunia
webdunia
webdunia

ಕನ್ನಡದ ವಿವಾದ ಮೈಮೇಲೆಳೆದುಕೊಂಡ ಕಿರುತೆರೆ ನಟ ಚಂದು ಗೌಡ

ಕನ್ನಡದ ವಿವಾದ ಮೈಮೇಲೆಳೆದುಕೊಂಡ ಕಿರುತೆರೆ ನಟ ಚಂದು ಗೌಡ
ಬೆಂಗಳೂರು , ಶುಕ್ರವಾರ, 4 ಜೂನ್ 2021 (09:37 IST)
ಬೆಂಗಳೂರು: ಒಂದೆಡೆ ಗೂಗಲ್ ನಲ್ಲಿ ಕನ್ನಡ ಭಾಷೆಗೆ ಅವಮಾನವಾಗಿದ್ದರೆ ಇನ್ನೊಂದೆಡೆ ಕಿರುತೆರೆ ನಟ, ಲಕ್ಷ್ಮೀ ಬಾರಮ್ಮಾ ಧಾರವಾಹಿ ಖ್ಯಾತಿಯ ನಟ ಚಂದು ಗೌಡ ಮತ್ತು ನಟಿ ಆಶಿಕಾ ಪಡುಕೋಣೆ ಕನ್ನಡದ ಬಗ್ಗೆ ತಪ್ಪಾಗಿ ಮಾತನಾಡಿ ವಿವಾದ ಮೈಮೇಲೆಳೆದುಕೊಂಡಿದ್ದಾರೆ.


ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಇಬ್ಬರೂ ಕಲಾವಿದರು ಅಲ್ಲಿನ ಸಂದರ್ಶನವೊಂದರಲ್ಲಿ ಬೆಂಗಳೂರಿನಲ್ಲಿ ಇರುವ ಶೇ.70 ರಿಂದ 80 ಮಂದಿ ತೆಲುಗು ಮಾತನಾಡುವವರು’ ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದು ವಿವಾದವಾಗುತ್ತಿದ್ದಂತೇ ಇಬ್ಬರೂ ಕಲಾವಿದರು ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಮಾಡಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಬೆಂಗಳೂರಿನ ಶೇ.70 ರಿಂದ 80 ಜನ ತೆಲುಗು ಧಾರವಾಹಿ ನೋಡುತ್ತಾರೆ ಎಂದು ಹೇಳುವುದು ನಮ್ಮ ಉದ್ದೇಶವಾಗಿತ್ತು. ನಾನು ಹುಟ್ಟಿ ಬೆಳೆದಿರುವುದು ಕರ್ನಾಟಕದಲ್ಲೇ. ಆ ಸಂದರ್ಶನವನ್ನು ಸರಿಯಾಗಿ ನೋಡಿದರೆ ನಿಮಗೆ ನಿಜಾಂಶ ತಿಳಿಯುತ್ತದೆ. ಕನ್ನಡವನ್ನು ಕೆಳಗಿಳಿಸುವ ಕೆಲಸ ಯಾವತ್ತೂ ಮಾಡಲ್ಲ.ದುಡ್ಡಿಗೋಸ್ಕರ ಕನ್ನಡವನ್ನು ಮಾರಿದ್ದೇವೆ ಎಂಬ ಆಪಾದನೆ ನಮ್ಮ ಮೇಲೆ ಕೇಳಿಬಂದಿದೆ. ಅಂತಹ ಕೀಳುಮಟ್ಟದ ಕೆಲಸ ಯಾವತ್ತೂ ಮಾಡಲ್ಲ’ ಎಂದು ಚಂದು ಗೌಡ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ, ಧಾರವಾಹಿ ಮಂದಿಗೆ ಸಿಹಿ ಸುದ್ದಿ