Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ಚಾರ್ಲಿಗೆ ಮಲಯಾಳಂ ಗಾಯಕ ವಿನೀತ್ ಧ್ವನಿ

ರಕ್ಷಿತ್ ಶೆಟ್ಟಿ ಚಾರ್ಲಿಗೆ ಮಲಯಾಳಂ ಗಾಯಕ ವಿನೀತ್ ಧ್ವನಿ
ಬೆಂಗಳೂರು , ಗುರುವಾರ, 3 ಜೂನ್ 2021 (09:24 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಚಾರ್ಲಿ 777 ಸಿನಿಮಾ ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೆ ಈಗ ಮಲಯಾಳಂ ಖ್ಯಾತ ಗಾಯಕ ವಿನೀತ್ ಶ್ರೀನಿವಾಸನ್ ಧ್ವನಿ ನೀಡಿದ್ದಾರೆ.


ಚಾರ್ಲಿ ಸಿನಿಮಾದ ಮಲಯಾಳಂ ಅವತರಣಿಕೆಯ ಹಾಡೊಂದನ್ನು ವಿನೀತ್ ಹಾಡಿದ್ದಾರೆ. ಈ ವಿಚಾರವನ್ನು ಖುದ್ದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಮಲಯಾಳಂನ ಖ್ಯಾತ ನಟ ಶ್ರೀನಿವಾಸನ್ ಪುತ್ರರಾಗಿರುವ ವಿನೀತ್ ನಟ ಜೊತೆಗೆ ಮಲಯಾಳಂನಲ್ಲಿ ಅನೇಕ ಹಿಟ್ ಹಾಡುಗಳನ್ನು ಕೊಟ್ಟವರು. ಈಗ ಚಾರ್ಲಿ ಸಿನಿಮಾದ ಹಾಡಿನ ರೆಕಾರ್ಡಿಂಗ್ ಮುಗಿಸಿದ್ದಾರೆ. ರಕ್ಷಿತ್ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾಗೆ ಕಿರಣ್ ರಾಜು ಆಕ್ಷನ್ ಕಟ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಲ್ಲಿ ಹಸಿದವರಿಗೆ ದರ್ಶನ್ ಅಭಿಮಾನಿಗಳಿಂದ ಊಟದ ವ್ಯವಸ್ಥೆ