Publish Date: Fri, 04 Jun 2021 (09:20 IST)
Updated Date: Fri, 04 Jun 2021 (09:22 IST)
ಬೆಂಗಳೂರು: ಕನ್ನಡ ಭಾಷೆಗೆ ಗೂಗಲ್ ನಲ್ಲಿ ಅವಮಾನವಾಗಿದ್ದನ್ನು ಸ್ಯಾಂಡಲ್ ವುಡ್, ಕಿರುತೆರೆಯ ಕಲಾವಿದರು ಒಗ್ಗಟ್ಟಾಗಿ ಸಾಮಾಜಿಕ ಜಾಲತಾಣದ ಮೂಲಕ ಖಂಡಿಸಿದ್ದಾರೆ.
ಗೂಗಲ್ ನಲ್ಲಿ ಅತ್ಯಂತ ಕೆಟ್ಟ ಭಾಷೆ ಯಾವುದು ಎಂಬ ಪ್ರಶ್ನೆಗೆ ಕನ್ನಡ ಎಂದು ಉತ್ತರ ಬರುತ್ತಿತ್ತು. ಇದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲೆಡೆಯಿಂದ ಒಕ್ಕೊರಲಾಗಿ ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಇದಕ್ಕೆ ಸ್ಯಾಂಡಲ್ ವುಡ್ ಕಲಾವಿದರು, ಕಿರುತೆರೆ ಕಲಾವಿದರೂ ಕೈ ಜೋಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಗೂಗಲ್ ವಿರುದ್ಧ ರಿಪೋರ್ಟ್ ಮಾಡಿ ಎಂದು ಕಲಾವಿದರು ಸಂದೇಶ ಕೊಟ್ಟಿದ್ದಾರೆ. ಇವರೆಲ್ಲರ ಒಕ್ಕೊರಲಿನ ಕರೆಗೆ ಕೊನೆಗೂ ಮಣಿದ ಗೂಗಲ್ ಕ್ಷಮೆ ಯಾಚಿಸಿತು.