Publish Date: Thu, 03 Jun 2021 (09:18 IST)
Updated Date: Thu, 03 Jun 2021 (09:20 IST)
ಬೆಂಗಳೂರು: ಬಾದ್ ಶಹಾ ಕಿಚ್ಚ ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ.
ಇದೀಗ ಕಿಚ್ಚ ತಮ್ಮ ಹುಡುಗರ ಮೂಲಕ ಗುಂಡ್ಲುಪೇಟೆಯ ಬುದ್ಧಿಮಾಂದ್ಯ ಶಾಲೆಯ ಮಕ್ಕಳಿಗೆ ನೆರವಾಗುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.
ಕೊರೋನಾ ಸಂಕಷ್ಟ ಕಾಲದಲ್ಲಿ ಹಿರಿಯ ಕಲಾವಿದರಿಗೆ ಕಿಟ್ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದ ಸುದೀಪ್, ಶಾಲಾ ಶಿಕ್ಷಕರಿಗೂ ನೆರವಾಗಿದ್ದರು. ಇದೀಗ ಸಂಕಷ್ಟದಲ್ಲಿರುವ ಮಕ್ಕಳಿಗೆ ತಮ್ಮ ಕೈಲಾದ ನೆರವು ನೀಡಿದ್ದಾರೆ.