Publish Date: Tue, 01 Jun 2021 (12:19 IST)
Updated Date: Tue, 01 Jun 2021 (12:21 IST)
ಬೆಂಗಳೂರು: ನಟಿ ರಕ್ಷಿತಾ ಪ್ರೇಮ್ ಲಾಕ್ ಡೌನ್ ನಲ್ಲಿ ತಮ್ಮ ಮಗ ಸೂರ್ಯ ಸೇರಿದಂತೆ ಎಲ್ಲಾ ಮಕ್ಕಳ ಸ್ಥಿತಿ ಗತಿ ಬಗ್ಗೆ ಹೇಳಿಕೊಂಡು ಮರುಕಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಬೇಸಿಗೆ ರಜೆಯ ಮಜಾ ಇಲ್ಲ. ತಮ್ಮ ಸ್ನೇಹಿತರ ಜೊತೆಗೆ ಆಟವಾಡುವ ಖುಷಿ ಇಲ್ಲ. ಮನೆಯೊಳಗೇ ಗೂಗಲ್ ಮೀಟ್ ಮೂಲಕ ಸ್ನೇಹಿತರನ್ನು ಭೇಟಿಯಾಗುವ ಪರಿಸ್ಥಿತಿ. ನನ್ನ ಮಗ ಸೂರ್ಯ ಇತ್ತೀಚೆಗೆ ಮನೆಯೊಳಗೇ ಇದ್ದು ತುಂಬಾ ಬೇಜಾರು ಎನ್ನುತ್ತಿದ್ದಾನೆ.
ಮಾನಸಿಕವಾಗಿ ಮಕ್ಕಳು ಕುಗ್ಗಿ ಹೋಗುತ್ತಿದ್ದಾರೆ. ಆದರೆ ಬೇರೆ ದಾರಿಯಿಲ್ಲ. ಪೋಷಕರೇ ಅವರಿಗೆ ಶಿಕ್ಷಕರಾಗುತ್ತಿದ್ದಾರೆ. ಕೆಲವೊಮ್ಮೆ ನನಗೂ ತಾಳ್ಮೆ ತಪ್ಪುತ್ತದೆ. ಆದರೆ ಏನೂ ಮಾಡಲಾಗದ ಅಸಹಾಯಕತೆ. ಈ ಸಂದರ್ಭದಲ್ಲಿ ತಾಳ್ಮೆಯಿಂದ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರಿಗೂ ಒಂದು ಧನ್ಯವಾದ. ಸಮಾಧಾನಕರ ವಿಚಾರವೆಂದರೆ ಕೊರೋನಾ ಸಂಖ್ಯೆ ಇಳಿಮುಖವಾಗುತ್ತಿದೆ. ಬೇಗನೇ ಪರಿಸ್ಥಿತಿ ಸುಧಾರಿಸಲಿ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.