Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ 8 ಮತ್ತೆ ಶುರುವಾಗೋದು ಯಾವಾಗ ಗೊತ್ತಾ?

ಬಿಗ್ ಬಾಸ್ ಕನ್ನಡ 8 ಮತ್ತೆ ಶುರುವಾಗೋದು ಯಾವಾಗ ಗೊತ್ತಾ?
ಬೆಂಗಳೂರು , ಭಾನುವಾರ, 13 ಜೂನ್ 2021 (09:06 IST)
ಬೆಂಗಳೂರು: ಕೊರೋನಾದಿಂದಾಗಿ ಅರ್ಧಕ್ಕೇ ನಿಂತ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದು ವೀಕ್ಷಕರಿಗೆ ಖುಷಿ ನೀಡಿದೆ.

 

ಈ ಬಾರಿ ವಿಜೇತರು ಯಾರು ಎಂದು ತೀರ್ಮಾನವಾಗದೇ ಶೋ ಮುಗಿದು ಹೋಯಿತಲ್ಲಾ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಬಿಬಿಕೆ8 ಪುನರರಾರಂಭವಾಗುತ್ತಿದೆ ಎಂಬ ಸುದ್ದಿ ಖುಷಿ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ. ವಾಹಿನಿ ಕಡೆಯಿಂದ ಸ್ಪಷ್ಟನೆ ಬಂದಿಲ್ಲ.

ಮೂಲಗಳ ಪ್ರಕಾರ ಲಾಕ್ ಡೌನ್ ಎಲ್ಲಾ ಮುಗಿದು ಸಹಜ ಸ್ಥಿತಿಗೆ ಬಂದ ಬಳಿಕ ಅಂದರೆ ಜೂನ್ ಕೊನೆಯ ವಾರದಿಂದ ಬಿಗ್ ಬಾಸ್ 8 ಮತ್ತೆ ಆರಂಭವಾಗಬಹುದು ಎನ್ನಲಾಗಿದೆ. ಆದರೆ ಹೊಸತನದಿಂದ ಶೋ ಪುನರಾರಂಭವಾಗಬಹುದು ಎನ್ನಲಾಗುತ್ತಿದೆ. ಯಾವ ರೀತಿ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕಷ್ಟದಲ್ಲಿ ಒಗ್ಗಟ್ಟಾದ ಸ್ಯಾಂಡಲ್ ವುಡ್ ತಾರೆಯರು