Select Your Language

Notifications

webdunia
webdunia
webdunia
webdunia

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮೂವರು ಸ್ಯಾಂಡಲ್ ವುಡ್ ಪ್ರತಿಭಾವಂತರು

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮೂವರು ಸ್ಯಾಂಡಲ್ ವುಡ್ ಪ್ರತಿಭಾವಂತರು
ಬೆಂಗಳೂರು , ಬುಧವಾರ, 16 ಜೂನ್ 2021 (09:43 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಪ್ರತಿಭಾವಂತ ನಟರೆನಿಸಿಕೊಂಡಿದ್ದ ಮೂವರು ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಈ ಪೈಕಿ ಒಬ್ಬರು ಸಂಚಾರಿ ವಿಜಯ್ ಆದರೆ, ಇನ್ನಿಬ್ಬರು ಶಂಕರ್ ನಾಗ್ ಹಾಗೂ ಸುನಿಲ್.


ವಿಪರ್ಯಾಸವೆಂದರೆ ಎಲ್ಲರೂ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಚಿಕ್ಕವಯಸ್ಸಿನಲ್ಲೇ ಇಹಲೋಕದ ಪಯಣ ಮುಗಿಸಿದ್ದಾರೆ. ನಟ, ನಿರ್ದೇಶಕ ಶಂಕರ್ ನಾಗ್ ರಸ್ತೆ ಅಪಘಾತ ಇಂದಿಗೂ ಚಿತ್ರರಂಗ ಮರೆಯಲ್ಲ. ಶಂಕರ್ ನಾಗ್ ಕಾರು ಲಾರಿಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಇನ್ನು, ಸ್ಪರದ್ರೂಪಿ ನಟ ಸುನಿಲ್ ಸಾವು ಕೂಡಾ ಇದೇ ರೀತಿ ಆಗಿತ್ತು. ಕಾರ್ಯಕ್ರಮ ಮುಗಿಸಿ ರಾತ್ರಿ ಸಂಗಡಿಗರೊಂದಿಗೆ ಪ್ರಯಾಣ ಮಾಡುತ್ತಿದ್ದವರ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ಈ ಸಾಲಿಗೆ ಸಂಚಾರಿ ವಿಜಯ್ ಕೂಡಾ ಸೇರಿರುವುದು ದುರಂತ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ ತಿಂಗಳು ಸ್ಯಾಂಡಲ್ ವುಡ್ ಪಾಲಿಗೆ ಕರಾಳ