Publish Date: Wed, 16 Jun 2021 (09:02 IST)
Updated Date: Wed, 16 Jun 2021 (09:04 IST)
ಬೆಂಗಳೂರು: ಬ್ರೈನ್ ಡೆಡ್ ಆಗಿ ಸಾವನ್ನಪ್ಪಿದ ನಟ ಸಂಚಾರಿ ವಿಜಯ್ ಇಬ್ಬರು ಯುವಕರ ಬಾಳಿಗೆ ಕಣ್ಣಾಗಿದ್ದಾರೆ. ಜೊತೆಗೆ ಒಬ್ಬ ಮಹಿಳೆಯ ಜೀವವುಳಿಸಿದ್ದಾರೆ.
ಸಂಚಾರಿ ವಿಜಯ್ ಸಾವಿಗೆ ಮೊದಲು ಅವರ ಕುಟುಂಬ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಹೀಗಾಗಿ ವೈದ್ಯರು ಅವರ ಎರಡು ಕಣ್ಣು, ಕಿಡ್ನಿ, ಶ್ವಾಸಕೋಶ, ಹೃದಯದ ಕವಾಟ, ಲಿವರ್ ನ್ನು ಪಡೆದುಕೊಂಡಿತ್ತು.
ಇದೀಗ ವಿಜಯ್ ಕಣ್ಣುಗಳನ್ನು ಇಬ್ಬರು ಯುವಕರಿಗೆ ಅಳವಡಿಸಲಾಗಿದೆ. ಕಿಡ್ನಿಯನ್ನು ಬೆಂಗಳೂರಿನ ಓರ್ವ ಮಹಿಳೆಗೆ ಅಳವಡಿಸಲಾಗಿದೆ. ಇದರಿಂದಾಗಿ ಸಾವಿನ ಬಳಿಕವೂ ವಿಜಯ್ ಜೀವಂತವಾಗಿದ್ದಾರೆ.