Select Your Language

Notifications

webdunia
webdunia
webdunia
webdunia

ನಟ ಚೇತನ್ ಗೆ ಖಡಕ್ ಎಚ್ಚರಿಕೆ ಕೊಟ್ಟ ರಕ್ಷಿತ್ ಶೆಟ್ಟಿ

ನಟ ಚೇತನ್ ಗೆ ಖಡಕ್ ಎಚ್ಚರಿಕೆ ಕೊಟ್ಟ ರಕ್ಷಿತ್ ಶೆಟ್ಟಿ
ಬೆಂಗಳೂರು , ಮಂಗಳವಾರ, 15 ಜೂನ್ 2021 (09:14 IST)
ಬೆಂಗಳೂರು: ಕನ್ನಡ ಚಿತ್ರರಂಗವನ್ನು ಕಳಪೆ ಎಂದವರಿಗೆ ಬೆಂಬಲ ಕೊಟ್ಟ ನಟ ಚೇತನ್ ಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.


‘ದಕ್ಷಿಣ ಭಾರತದ ಅತ್ಯಂತ ಕೆಟ್ಟ ಚಿತ್ರರಂಗವಾದ ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಭರವಸೆ ಮೂಡಿದೆ. ಕನ್ನಡ ಸಿನಿಮಾ ಎಂಬ ಮರುಭೂಮಿಯಲ್ಲಿ ಚೇತನ್ ಮಳೆಯಂತೆ ಬಂದಿದ್ದಾರೆ’ ಎಂದು ವ್ಯಕ್ತಿಯೊಬ್ಬರು ಮಾಡಿದ ಆಕ್ಷೇಪಾರ್ಹ ಟ್ವೀಟ್ ನ್ನು ಚೇತನ್ ಬೆಂಬಲಿಸಿದ್ದಾರೆ.

ಇದು ರಕ್ಷಿತ್ ಶೆಟ್ಟಿ ಗಮನಕ್ಕೆ ಬಂದಿದೆ. ‘ಚೇತನ್ ಅವರೇ ನಿಮ್ಮ ಕೆಲಸಗಳನ್ನು ನಾನು ಗೌರವಿಸುತ್ತೇನೆ. ಆದರೆ ಮೊದಲು ನಿಮ್ಮ ಆಲೋಚನೆಯನ್ನು ಸರಿಪಡಿಸಿಕೊಳ್ಳಿ. ದಕ್ಷಿಣ ಸಿನಿಮಾ ರಂಗ ನನ್ನಂತಹ ಹಲವರಿಗೆ ನೆಲೆ ಕೊಟ್ಟಿದೆ ಮತ್ತು ಮಾತನಾಡಲು ಅವಕಾಶ ಕೊಟ್ಟಿದೆ. ಇದನ್ನು ಹಲವು ದಿಗ್ಗಜರು ಕಟ್ಟಿದ್ದಾರೆ. ಕೆಟ್ಟದ್ದನ್ನು ಬಿತ್ತಿದರೆ ಕೆಡುಕೇ ಆಗುತ್ತದೆ. ಅದಕ್ಕೆ ನಿಮಗೆ ಒಳಿತಾಗಲಿ’ ಎಂದು ಖಾರವಾಗಿ ತಿರುಗೇಟು ಕೊಟ್ಟಿದ್ದಾರೆ.  ಇದಕ್ಕೆ ಚೇತನ್ ಕೂಡಾ ಪ್ರತಿಕ್ರಿಯಿಸಿದ್ದು, ನಿಮ್ಮ ವಾದವನ್ನು ಒಪ್ಪುತ್ತೇನೆ. ನಾನೂ ಕೂಡಾ ಇದೇ ಚಿತ್ರರಂಗದವನು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ವಿಜಯ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸಿಗಲ್ಲ ಅವಕಾಶ