Publish Date: Mon, 14 Jun 2021 (12:52 IST)
Updated Date: Mon, 14 Jun 2021 (12:54 IST)
ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ (38) ಇಹಲೋಕ ತ್ಯಜಿಸಿದ್ದಾರೆ.
ಮೆದುಳಿಗೆ ತೀವ್ರ ಪೆಟ್ಟುಮಾಡಿಕೊಂಡಿದ್ದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹಾಗಿದ್ದರೂ ಪ್ರಯೋಜನವಾಗಿಲ್ಲ. ಇದಾದ ಬಳಿಕ ಕೋಮಾ ಹಂತಕ್ಕೆ ತಲುಪಿದ್ದ ವಿಜಯ್ ಗುಣಮುಖರಾಗಲೇ ಇಲ್ಲ. ಮೆದುಳು ನಿಷ್ಕ್ರಿಯವಾಗಿದ್ದ ಅವರು ನಿನ್ನೆ ರಾತ್ರಿಯಿಂದ ಉಸಿರಾಟವನ್ನೂ ನಿಲ್ಲಿಸಿದ್ದರು ಎಂದು ಅಪೋಲೋ ಆಸ್ಪತ್ರೆ ವೈದ್ಯರು ಹೇಳಿದ್ದರು.
ಹೀಗಾಗಿ ಅವರ ಕುಟುಂಬಸ್ಥರು ವಿಜಯ್ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ. ಅವರ ಸಾವಿಗೆ ನಟ ಕಿಚ್ಚ ಸುದೀಪ್ ಸೇರಿದಂತೆ ಇಡೀ ಚಿತ್ರರಂಗ, ಸಚಿವ ಸಿಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.