Publish Date: Tue, 15 Jun 2021 (09:51 IST)
Updated Date: Tue, 15 Jun 2021 (09:59 IST)
ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಸ್ಥಿತಿಗೆ ತಲುಪಿದ್ದ ನಟ ಸಂಚಾರಿ ವಿಜಯ್ ನೋಡಿ ಅಭಿಮಾನಿಗಳು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರನ್ನು ನೆನೆಸಿಕೊಂಡಿದ್ದಾರೆ.
ವಿಪರ್ಯಾಸವೆಂದರೆ ಕಳೆದ ವರ್ಷ ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅಕಾಲಿಕವಾಗಿ ಸಾವಿಗೀಡಾಗಿದ್ದರು. ಇದೇ ದಿನ ವಿಜಯ್ ಕೂಡಾ ದುರಂತ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಇಬ್ಬರೂ ಯಾವುದೇ ಸಿನಿಮಾ ಹಿನ್ನಲೆಯಿಲ್ಲದೇ ಸ್ವ ಪ್ರತಿಭೆಯಿಂದ ಬೆಳೆದು ಬಂದವರು. ಇಬ್ಬರೂ ಈಗಷ್ಟೇ ಸಿನಿಮಾ ರಂಗದಲ್ಲಿ ಹೆಸರು ಮಾಡುತ್ತಿದ್ದವರು. ವಿಪರ್ಯಾಸವೆಂದರೆ ಇಬ್ಬರೂ ಒಂದೇ ದಿನ ದುರಂತಕ್ಕೀಡಾಗಿದ್ದಾರೆ ಎಂದು ನೆಟ್ಟಿಗರು ದುಃಖ ವ್ಯಕ್ತಪಡಿಸಿದ್ದಾರೆ.