Select Your Language

Notifications

webdunia
webdunia
webdunia
webdunia

ಏಳು ಜನರಿಗೆ ಜೀವ ನೀಡಿ ಪ್ರಾಣ ಬಿಟ್ಟ ಸಂಚಾರಿ ವಿಜಯ್

ಏಳು ಜನರಿಗೆ ಜೀವ ನೀಡಿ ಪ್ರಾಣ ಬಿಟ್ಟ ಸಂಚಾರಿ ವಿಜಯ್
ಬೆಂಗಳೂರು , ಮಂಗಳವಾರ, 15 ಜೂನ್ 2021 (09:29 IST)
ಬೆಂಗಳೂರು: ರಸ್ತೆ ಅಪಘಾತದಿಂದಾಗಿ ಬ್ರೈನ್ ಡೆಡ್ ಸ್ಥಿತಿಗೆ ತಲುಪಿದ್ದ ನಟ ಸಂಚಾರಿ ವಿಜಯ್ ಏಳು ಜನರಿಗೆ ಜೀವ ನೀಡಿ ಪ್ರಾಣ ಬಿಟ್ಟಿದ್ದಾರೆ.


ಬ್ರೈನ್ ಡೆಡ್ ಸ್ಥಿತಿಗೆ ತಲುಪಿದ್ದಾರೆಂದು ತಿಳಿದ ತಕ್ಷಣ ಕುಟುಂಬಸ್ಥರು ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ನಿನ್ನೆ ರಾತ್ರಿ ಎರಡೆರಡು ಬಾರಿ ಮೆದುಳಿನ ಪರೀಕ್ಷೆ ನಡೆಸಿದ ವೈದ್ಯರು ಬಳಿಕ ಅಂಗಾಂಗ ದಾನ ಪ್ರಕ್ರಿಯೆ ಆರಂಭಿಸಿದರು.

ಅದರಂತೆ ಅವರ ಎರಡು ಕಣ್ಣುಗಳು, 1 ಲಿವರ್, ಹೃದಯದ ಕವಾಟಗಳು, ಶ್ವಾಸಕೋಶ ಮತ್ತು ಎರಡು ಕಿಡ್ನಿಗಳನ್ನು ಪಡೆಯಲಾಯಿತು. ತಕ್ಷಣವೇ ಇದನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿರುವ ಅಗತ್ಯವಿದ್ದ ರೋಗಿಗಳಿಗೆ ಕಸಿ ಮಾಡಲಾಯಿತು. ಬಳಿಕ ಬೆಳಗಿನ ಜಾವ ಅಧಿಕೃತವಾಗಿ ವೈದ್ಯರು ನಿಧನದ ವಾರ್ತೆಯನ್ನು ಘೋಷಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಚೇತನ್ ಗೆ ಖಡಕ್ ಎಚ್ಚರಿಕೆ ಕೊಟ್ಟ ರಕ್ಷಿತ್ ಶೆಟ್ಟಿ