Select Your Language

Notifications

webdunia
webdunia
webdunia
webdunia

ಜೂನ್ ತಿಂಗಳು ಸ್ಯಾಂಡಲ್ ವುಡ್ ಪಾಲಿಗೆ ಕರಾಳ

ಜೂನ್ ತಿಂಗಳು ಸ್ಯಾಂಡಲ್ ವುಡ್ ಪಾಲಿಗೆ ಕರಾಳ
ಬೆಂಗಳೂರು , ಬುಧವಾರ, 16 ಜೂನ್ 2021 (09:32 IST)
ಬೆಂಗಳೂರು: ಯಾಕೋ ಜೂನ್ ತಿಂಗಳು ಸ್ಯಾಂಡಲ್ ವುಡ್ ಪಾಲಿಗೆ ಆಗಿ ಬರೋಲ್ಲವೆನಿಸುತ್ತದೆ. ಈ ತಿಂಗಳು ಕಳೆದ ಎರಡು ವರ್ಷಗಳಿಂದ ಕೆಟ್ಟ ಸುದ್ದಿಯನ್ನು ತರುತ್ತಿದೆ.


ಕಳೆದ ವರ್ಷ ಜೂನ್ ನಲ್ಲಿ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದ ಚಿರು, ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ತುಂಬು ಗರ್ಭಿಣಿ ಮೇಘನಾ ಸರ್ಜಾರನ್ನು ಅಗಲಿದ್ದರು. ಈ ಪ್ರತಿಭಾವಂತ ನಟನ ಅಗಲುವಿಕೆ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿತ್ತು.

ಈ ವರ್ಷವೂ ಜೂನ್ ಮತ್ತೊಬ್ಬ ಪ್ರತಿಭಾವಂತ ನಟನನ್ನು ಕಿತ್ತುಕೊಂಡಿದೆ. ಈ ವರ್ಷ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅದೂ ಅನಿರೀಕ್ಷಿತ ಹಾಗೂ ಅಕಾಲಿಕ ಸಾವು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಜೂನ್ ಸ್ಯಾಂಡಲ್ ವುಡ್ ಪಾಲಿಗೆ ಕರಾಳವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ವಿಜಯ್ ಅಪಘಾತ ಯುವಜನಾಂಗಕ್ಕೊಂದು ಪಾಠ