ಅಮಿತ್ ಶಾ ಪ್ರಧಾನಿ ಮೋದಿ ಜೆಪಿ ನಡ್ಡಾ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಲಿ ಎಂದು ಕೆಪಿಸಿಸಿ ರಾಮಲಿಂಗರೆಡ್ಡಿ ಹೇಳಿದ್ದಾರೆ.ಮೋದಿ, ಅಮೀತ್ ಶಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ ಚುನಾವಣೆ ಇದ್ದಾಗ ವಾರಕ್ಕೆ ಒಂದು ಬಾರಿ ರಾಜ್ಯಗಳಿಗೆ ಭೇಟಿ ನಿಡ್ತಾರೆ.ನಾನು ಒಂದುಸಲಹೆ ಕೊಡ್ತೆನೆ, ಇಲ್ಲೆ ವಾಸ್ತವ್ಯ ಮಾಡಲಿ ರಾಜ್ಯದ ಸಮಸ್ಯೆ ಇದ್ದಾಗ ಮೋದಿ ಗಮನಹರಿಸಲಿಲ್ಲ.ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲ. ಖಾಲಿ ಕುರ್ಚಿ ಮುಂದೆ ಭಾಷಣ ಮಾಡಿ ಬರ್ತಾ ಇದ್ರು, ಹಾಗಾಗಿ ಮೋದಿ, ಅಮೀತ್ ಶಾ ಅವರನ್ನು ಕರೆಸುತ್ತಿದ್ದಾರೆ. ಎಂದು ಹೇಳಿದರು ಇನ್ನೂ ಇದೇ ವಿಚಾರಕ್ಕೆ ಸಲೀಂ ಅಹ್ಮದ್ ಈಶ್ವರ್ ಖಂಡ್ರೆ ಮಾತನಾಡಿ ಅಮಿತ್ ಶಾ ಅವರಿಗೆ ನೈತಿಕತೆ ಇದ್ರೆ 40% ಪರ್ಸಟೆಂಜ್ ಬಗ್ಗೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.