ಉತ್ತರಾಖಂಡದಲ್ಲಿ 35 ವರ್ಷದ ಆನೆಯ ಜೀವ ಉಳಿಸಲು ಎನ್ಜಿಒದೊಂದಿಗೆ ಭಾರತೀಯ ಸೇನೆಯು ಕೈಜೋಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಆನೆಯ ಹೆಸರು ಮೋತಿ. ವಯೋಸಹಜ ಕಾರಣದಿಂದ ನಿತ್ರಾಣಗೊಂಡಿದ್ದ ಇದು ವೈಲ್ಡ್ಲೈಫ್ ಎಸ್ಒಎಸ್ ಮತ್ತು ಸೇನೆಯ ಆರೈಕೆ ಮತ್ತು ಚಿಕಿತ್ಸೆಯ ಪರಿಣಾಮವಾಗಿ ಚೇತರಿಸಿಕೊಳ್ಳುತ್ತಿದೆ. ಉತ್ತರಾಖಂಡದ ರಾಮನಗರ ಜಿಲ್ಲೆಯಲ್ಲಿ ಮೋತಿ ಕುಸಿದು ಬೀಳುತ್ತಿದ್ದಂತೆ ಗಂಭೀರವಾಗಿ ಅಸ್ವಸ್ಥಗೊಂಡಿತು. ಆಗ ಮಾಜಿ ಸೇನಾ ಮುಖ್ಯಸ್ಥ ವಿ ಕೆ ಸಿಂಗ್ ಭಾರತೀಯ ಸೇನೆಯ ಸಹಾಯ ಕೋರಿದರು. ಭಾರತೀಯ ಸೇನೆಯ ಎಂಜಿನಿಯರ್ಗಳ ತಂಡವು ಮೋತಿಗೆ ಅವಶ್ಯಕವಿರುವ ಚಿಕಿತ್ಸೆಗೆ ಸಹಾಯ ಮಾಡಿತು. 24 ಗಂಟೆಗಳೊಳಗೆ ಅದು ಎದ್ದು ನಿಲ್ಲಲು ಬೇಕಾದ ತಾಂತ್ರಿಕ ಸಹಾಯವನ್ನು ಈ ತಂಡ ಮಾಡಿತು. ಮೋತಿ ಭಿಕ್ಷೆ ಬೇಡಲು ಸಹಕರಿಸುವ ಆನೆ. 35 ವರ್ಷಗಳ ತನಕ ಎಣಿಕೆಗೆ ಸಿಗದಷ್ಟು ಸಾರ್ವಜನಿಕ ಸವಾರಿ ಪೂರೈಸಿದೆ.