Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿ ಮೇಲೆ ಅವಾಹನೆಯಾಯ್ತು ಪಂಜುರ್ಲಿ ದೈವ..!

Panjurli God called on the student
bangalore , ಭಾನುವಾರ, 12 ಫೆಬ್ರವರಿ 2023 (18:28 IST)
ಕಾಲೇಜು ಆನಿವಲ್ ಡೇ ಫಂಕ್ಷನ್ ವೇಳೆ ದ್ವೀತಿಯ ಪಿಯುಸಿ ವಿದ್ಯಾರ್ಥಿ ಮೇಲೆ ದೈವ ಅವಾಹನೆಯಾಗಿದೆ.ವಿಶಾಲ್ ಎಂಬ ವಿದ್ಯಾರ್ಥಿ ಮೇಲೆ ಪಂಜುರ್ಲಿ ದೈವ ಅವಾಹನೆಯಾಗಿದ್ದು.ಕಾಂತಾರ ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
 
ಹೊಂಬೇಗೌಡ ಪಿಯು ಕಾಲೇಜಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ವರಹರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಅವಾಹನೆಯಾಗಿದೆ.ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಕಾಲೇಜು ಇದ್ದಾಗಿದ್ದು,ಕಾರ್ಯಕ್ರಮದಲ್ಲಿ ಪಂಜುರ್ಲಿ ದೈವದ ವೇಶವನ್ನ ವಿದ್ಯಾರ್ಥಿ ಧರಿಸಿದ್ದ .ವೇದಿಕೆ ಮೇಲಿಂದ ಕೆಳಗೆ ಬಂದು ದ್ವಿತೀಯ ಪಿಯು ವಿದ್ಯಾರ್ಥಿ ನರ್ತಿಸಿದ.ನಾಲ್ಕೈದು ಮಂದಿ ವಿಶಾಲ್ ನನ್ನು ಸಮಾಧಾನಪಡಿಸಿದರೂ ಸಾಧ್ಯವಾಗಿಲ್ಲ.ಹೀಗಾಗಿ ಹಾಡನ್ನ ಆಯೋಜಕರು ನಿಲ್ಲಿಸಿದರು.ನಿನ್ನೆ ರಾತ್ರಿ ಈ ಘಟನೆ ನಡೆದಿದೆ.ವಿದ್ಯಾರ್ಥಿಯ ಆರ್ಭಟ ಕಂಡು ಪೋಷಕರು,ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಶಾಕ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆಯ ಶಾಕ್..!