Select Your Language

Notifications

webdunia
webdunia
webdunia
webdunia

ದಾಸರಹಳ್ಳಿ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿ ಅಬ್ಬರ

Ticket aspirants in Dasarahalli constituency are clamoring
bangalore , ಭಾನುವಾರ, 12 ಫೆಬ್ರವರಿ 2023 (14:30 IST)
ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿ ಧನಂಜಯ್ ಅಬ್ಬರ ಜೋರಾಗಿದೆ.ಸಾವಿರಾರು ಕಾರ್ಯಕರ್ತರೊಂದಿಗೆ ಪ್ರತಿಭಟನೆ ಮಾಡ್ತಿದ್ದು,ಸರ್ಕಾರ,ಕ್ಷೇತ್ರದ ಶಾಸಕರ ವಿರುದ್ಧ ಸಾವಿರಾರು ಕಾರ್ಯಕರ್ತರಿಂದ ಬೃಹತ್ ಪ್ರೊಟೆಸ್ಟ್ ನಡೆಯುತ್ತಿದೆ.
 
ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆ ಪೊಲೀಸರು,ಕಾರ್ಯಕರ್ತರ ನಡುವೆ ದೊಡ್ಡ ಹೈಡ್ರಾಮಾವೇ ನಡೆದಿದೆ.ಪ್ರತಿಭಟನಾ ನಿರತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
 
ಐದು ಸಾವಿರಕ್ಕೂ‌ಹೆಚ್ಚು ಜನರಿಂದ ಬೃಹತ್ ಪ್ರತಿಭಟನೆ ನಡೆದಿದ್ದು,ನಡು ರಸ್ತೆಯಲ್ಲೇ ನೂಕಾಟ ತಳ್ಳಾಟ ನಡೆದಿದೆ.ಹೀಗಾಗಿ ಪೊಲೀಸರು ಹಲವರಿಗೆ ಲಾಟಿ ಏಟಿನ ಬಿಸಿ ಮುಟ್ಟಿಸಲಾಗಿದೆ.ಹಲವರನ್ನ  ಖಾಕಿಪಡೆ ವಶಕ್ಕೆ ಪಡೆದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ಬಿಗ್ ಶಾಕ್