ಬೆಂಗಳೂರು : ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಬಿಗ್ ರಿಲೀಫ್ ಸಿಕ್ಕಿದೆ.
									
			
			 
 			
 
 			
					
			        							
								
																	ಚುನಾವಣಾ ಸಂದರ್ಭದಲ್ಲಿ ಡಿಕೆಶಿಗೆ ಮತ್ತು ಅವರ ಕುಟುಂಬಕ್ಕೆ ಸಿಬಿಐ ನೋಟಿಸ್ ಕೊಡುತ್ತಾ ಇದೆ. ಸುಖಾಸುಮ್ಮನೆ ಹಿಂಸೆ ಕೊಡುವ ಕೆಲಸವನ್ನು ಮಾಡುತ್ತಾ ಇದ್ದಾರೆ ಎಂಬ ವಿಚಾರವನ್ನು ಡಿಕೆಶಿ ಪರ ವಕೀಲ ಜಾದವ್ ಕೋರ್ಟ್ ಗಮನಕ್ಕೆ ತಂದಿದ್ದರು.
									
										
								
																	ಡಿಕೆ ಶಿವಕುಮಾರ್ ಈ ಪ್ರಕರಣದಲ್ಲಿ ಆರೋಪಿ. ಅವರನ್ನು ಹೊರತುಪಡಿಸಿ ಅವರ ಮಗಳನ್ನು ವಿಚಾರಣೆಗೆ ಕರೆಯುತ್ತಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ತೊಂದರೆ ಆಗುತ್ತಿದೆ.
									
											
							                     
							
							
			        							
								
																	ಚುನಾವಣೆಗೆ ಅಡ್ಡಿಪಡಿಸಬೇಕು, ಮಾನಸಿಕ ಹಿಂಸೆ ಕೊಡಬೇಕು ಅಂತಲೇ ಈ ರೀತಿ ಮಾಡಲಾಗುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು.