Publish Date: Sun, 12 Feb 2023 (14:44 IST)
Updated Date: Sun, 12 Feb 2023 (14:47 IST)
ಮಂಗಳೂರು : ಕನ್ಯಾಕುಮಾರಿ ಸಮುದ್ರದಲ್ಲಿ ಮಂಗಳೂರಿನ ಮೀನುಗಾರರ ಮೇಲೆ ಕಲ್ಲೆಸೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಆಳ ಸಮುದ್ರದ ಮೀನುಗಾರಿಕೆಗೆ ಮಂಗಳೂರಿನಿಂದ ಸುಮಾರು ಏಳೆಂಟು ಬೋಟ್ಗಳು ಕನ್ಯಾಕುಮಾರಿ ಬಳಿ ತೆರಳಿದ್ದರು. ಈ ವೇಳೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಮಂಗಳೂರು ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾಗ ತಮಿಳು ಮೀನುಗಾರರು ಅವರನ್ನು ತಡೆದಿದ್ದಾರೆ.
ಅದಾದ ಬಳಿಕ ಸಮುದ್ರದ ಮಧ್ಯೆಯೇ ಹತ್ತಾರು ಬೋಟ್ಗಳಿಂದ ಸುತ್ತುವರಿದು ಮಂಗಳೂರಿನ ಮೀನುಗಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.