Select Your Language

Notifications

webdunia
webdunia
webdunia
webdunia

ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಹಲ್ಲೆ

webdunia
mangalore , ಮಂಗಳವಾರ, 31 ಜನವರಿ 2023 (18:02 IST)
ಮಂಗಳೂರಿನಲ್ಲಿ ಟೋಲ್ ಸಿಬ್ಬಂದಿಗಳು ಗೂಂಡಾ ವರ್ತನೆ ತೋರಿದ್ದಾರೆ. ಮಂಗಳೂರು ಹೊರವಲಯದ ತಲಪಾಡಿ ಟೋಲ್ ಗೇಟ್​ನಲ್ಲಿ ಕಾರು ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯವನ್ನು ವಾಹನ ಸವಾರರು ಸೆರೆ ಹಿಡಿದಿದ್ದಾರೆ. ಕೇರಳ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ. ಕಾರಿನಲ್ಲಿದ ಕುಟುಂಬಸ್ಥರ ಎದುರೇ ಹಲ್ಲೆ ನಡೆಸಲಾಗಿದೆ. ಉಳ್ಳಾಲ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ
ನಡೆದಿದೆ. ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ CD ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ K.S. ಈಶ್ವರಪ್ಪ