Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿಹೊಳಿ CD ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ K.S. ಈಶ್ವರಪ್ಪ

Reacting to the release of Ramesh Jarakiholi CD
shivamoga , ಮಂಗಳವಾರ, 31 ಜನವರಿ 2023 (16:32 IST)
ಸಚಿವ ರಮೇಶ್ ಜಾರಕಿಹೊಳಿ CD ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ K.S. ಈಶ್ವರಪ್ಪ, ಅದರ ಬಗ್ಗೆ KPCC ಅಧ್ಯಕ್ಷ D.K.ಶಿವಕುಮಾರ್​ ಏನೂ ಉತ್ತರ ಕೊಟ್ಟಿಲ್ಲ. ಯಾವ್ಯಾವ ದೇಶದಲ್ಲಿ ಮನೆ ಮಾಡಿದ್ದೇನೆ ಅಂತ ಡಿಕೆಶಿ ಆಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ. ಅದು ಅವರ ವೈಯಕ್ತಿಕ, ನಾನು ಈ ಕುರಿತು ಕಾಮೆಂಟ್ ಮಾಡಲ್ಲ. ಆದರೆ, ಆಡಿಯೊ ಬಗ್ಗೆ ಅವರು ಉತ್ತರ ಕೊಡಲಿ. ಸರಿನೋ, ತಪ್ಪೋ ಏನಾದ್ರೂ ಪ್ರತಿಕ್ರಿಯೆ ನೀಡಲಿ ಎಂದು ಹೇಳಿದ್ರು. ಸತ್ರು BJP ಸೇರಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ K.S. ಈಶ್ವರಪ್ಪ, ಸಿದ್ದರಾಮಯ್ಯ ಜೀವಂತ ಇದ್ದಾಗಲೇ BJPಗೆ ಸೇರಿಸಲ್ಲ. ಅವರ ಹೆಣ ತಗೊಂಡು ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ. ಅವರ ಹೆಣ ನಾಯಿ ಕೂಡ ಮೂಸಲ್ಲ. ಸಿದ್ದರಾಮಯ್ಯ ಹಣೆಬರಹ ಮತದಾರರಿಗೆ ಗೊತ್ತು. ಈ ಮನುಷ್ಯ ನಂಬಿಗಸ್ಥ ಅಲ್ಲ ಎಂದು ಲೇವಡಿ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

CD ಕುರಿತು ಅಧ್ಯಕ್ಷರೇ ಉತ್ತರಿಸುತ್ತಾರೆ- M.B. ಪಾಟೀಲ್