Publish Date: Tue, 31 Jan 2023 (14:55 IST)
Updated Date: Tue, 31 Jan 2023 (15:12 IST)
ರಮೇಶ್ ಜಾರಕಿಹೊಳಿ ಆಡಿಯೊ ಬಹಿರಂಗವಾದ ವಿಚಾರದ ಕುರಿತು ಮಾಜಿ ಸಿಎಂ B.S.ಯಡಿಯೂರಪ್ಪ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅದು ಅವರಿಗೆ ಸಂಬಂಧಪಟ್ಟ ವಿಷಯ, ನಾನು ಈ ಬಗ್ಗೆ ಕಮೆಂಟ್ ಮಾಡಲ್ಲ. ನನಗೇನೂ ಎ ಟು ಝಡ್ ಗೊತ್ತಿಲ್ಲ ಎಂದು ತಿಳಿಸಿದ್ರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, BJP ರಾಷ್ಟ್ರೀಯ ಅಧ್ಯಕ್ಷ J.P. ನಡ್ಡಾ ಅವರು ಕರ್ನಾಟಕದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈ ಬಾರಿ 140ಕ್ಕೂ ಹೆಚ್ಚು ಕ್ಷೇತ್ರ ಗೆದ್ದು BJPಗೆ ಸ್ಪಷ್ಟ ಬಹುಮತ ಬರುತ್ತೆ ಎಂದು ಮಾಜಿ ಸಿಎಂ B.S ಯಡಿಯೂರಪ್ಪ ಹೇಳಿದ್ದಾರೆ. BJP ನಮ್ಮ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದ್ರು. ಮೋದಿಯಂತಹ ನಾಯಕ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ BJP ಅಧಿಕಾರಕ್ಕೆ ತರವಂತಹ ಸಂಕಲ್ಪವನ್ನು ಮತದಾರರು ಮಾಡಬೇಕು ಎಂದು ಹೇಳಿದ್ರು.