Select Your Language

Notifications

webdunia
webdunia
webdunia
webdunia

ಮಸೀದಿಯಲ್ಲಿ ಬಾಂಬ್ ಸ್ಫೋಟ! 89ಕ್ಕೇರಿದ ಸಾವಿನ ಸಂಖ್ಯೆ

ಮಸೀದಿಯಲ್ಲಿ ಬಾಂಬ್ ಸ್ಫೋಟ! 89ಕ್ಕೇರಿದ ಸಾವಿನ ಸಂಖ್ಯೆ
ಇಸ್ಲಾಮಾಬಾದ್ , ಶುಕ್ರವಾರ, 3 ಫೆಬ್ರವರಿ 2023 (09:10 IST)
ಇಸ್ಲಾಮಾಬಾದ್ : ಸೋಮವಾರ ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿಯೊಳಗೆ ನಡೆದ ಆತ್ಮಾಹುತಿ ದಾಳಿಗೆ ಇಲ್ಲಿಯವರೆಗೆ 89 ಜನರು ಮೃತಪಟ್ಟಿದ್ದಾರೆ ಹಾಗೂ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸೋಮವಾರ ಮಧ್ಯಾಹ್ನ ಪೇಶಾವರದ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಆತ್ಮಾಹುತಿ ದಾಳಿ ನಡೆದಿತ್ತು. ಇದರಿಂದ ಮಸೀದಿ ಛಾವಣಿ ಕುಸಿದಿದ್ದು, ಅಲ್ಲಿ ನೆರೆದಿದ್ದ ಜನರ ಮೇಲೆ ಬಿದ್ದಿದೆ.

ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಇನ್ನು ಕೂಡಾ ಮುಂದುವರಿದಿದೆ. ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 89ಕ್ಕೇರಿದೆ.

ಪ್ರತಿನಿತ್ಯ ಈ ಮಸೀದಿಯಲ್ಲಿ ಸುಮಾರು 300-400 ಜನರು ಪ್ರಾರ್ಥನೆಗಾಗಿ ಸೇರುತ್ತಾರೆ. ಸ್ಫೋಟ ಸಂಭವಿಸಿದ ಸಂದರ್ಭ 300ಕ್ಕೂ ಹೆಚ್ಚು ಜನರು ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಅವಶೇಷಗಳಡಿ ಇನ್ನೂ ಹಲವರು ಸಿಕ್ಕಿ ಬಿದ್ದಿರುವ ಶಂಕೆಯಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಎಚ್ಚರ: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಪ್ರತಿ ಸಿಗ್ನಲ್ನಲ್ಲೂ ಬೀಳುತ್ತೆ ದಂಡ!